ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಎರಡು ಪುಟಗಳ ಸುದೀರ್ಘ ಪತ್ರ ಬರೆದಿದ್ದಾರೆ.
ಕಾಶ್ಮೀರಿ ಪಂಡಿತರನ್ನು ಯಾವುದೇ ಭದ್ರತೆ ಇಲ್ಲದೇ ಮತ್ತೆ ಕಾಶ್ಮೀರಕ್ಕೆ ಬಲವಂತವಾಗಿ ಕಳುಹಿಸಬೇಡಿ ಎಂದು ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.
ಪ್ರಧಾನಮಂತ್ರಿಗಳೇ, ಭಾರತ ಜೋಡೋ ಯಾತ್ರೆಯ ವೇಳೆ ಕಾಶ್ಮೀರಿ ಪಂಡಿತರ ನಿಯೋಗ ನನ್ನನ್ನು ಭೇಟಿ ಮಾಡಿ ಅವರ ದುಃಖವನ್ನು ನನ್ನೊಂದಿಗೆ ತೋಡಿಕೊಂಡಿತು.
ಭಯೋತ್ಪಾದಕರಿಂದ ಹತ್ಯೆಗೆ ಗುರಿಯಾಗುತ್ತಿರುವ ಕಾಶ್ಮೀರಿ ಪಂಡಿತರನ್ನು ಸುರಕ್ಷತೆಯ ಗ್ಯಾರಂಟಿ ಇಲ್ಲದೇ ಮತ್ತೆ ಕಣಿವೆಗೆ ಬಲವಂತವಾಗಿ ಕಳುಹಿಸುವುದು ನಿರ್ದನಿಯ ಕ್ರಮವಾಗಿದೆ.
ಈ ಸಂಬಂಧ ನೀವು ಸೂಕ್ತ ಕ್ರಮಕೈಗೊಳ್ತೀರಿ ಎಂದು ಭಾವಿಸಿದ್ದೇನೆ.
ಅವರ ಸಮಸ್ಯೆಗಳ ಬಗ್ಗೆ ಪ್ರಧಾನಿಯವರ ಗಮನಕ್ಕೆ ತರುವ ಪ್ರಯತ್ನಕ್ಕೆ ತರುವ ಮಾಡುವುದಾಗಿ ನಾನು ಕಾಶ್ಮೀರಿ ಪಂಡಿತರಿಗೆ ಮಾತು ಕೊಟ್ಟಿದ್ದೇನೆ
ಎಂದು ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲಿ ರಾಹುಲ್ ಗಾಂಧಿ ಹೇಳಿದ್ದಾರೆ.
ಕನ್ಯಾಕುಮಾರಿಯಿಂದ ರಾಹುಲ್ ಗಾಂಧಿ ನೇತೃತ್ವದಲ್ಲಿ ಆರಂಭವಾಗಿದ್ದ ಭಾರತ ಜೋಡೋ ಯಾತ್ರೆ ಕಾಶ್ಮೀರದಲ್ಲಿ ಅಂತ್ಯವಾಗಿತ್ತು.
ADVERTISEMENT
ADVERTISEMENT