ಪೆಟ್ರೋಲ್​, ಡೀಸೆಲ್​ ಮೇಲೆ ತೆರಿಗೆ ಹೆಚ್ಚಳ

ಕೇರಳದಲ್ಲಿರುವ ಮುಖ್ಯಮಂತ್ರಿ ಪಿಣರಾಯ್​ ವಿಜಯನ್​ ನೇತೃತ್ವದ ಎಡಪಂಥೀಯ ಸರ್ಕಾರ ಪೆಟ್ರೋಲ್​ ಮತ್ತು ಡೀಸೆಲ್​ ಮೇಲೆ ಸುಂಕ ಹೆಚ್ಚಳ ಮಾಡಿದೆ.

ಪ್ರತಿ ಲೀಟರ್​ ಪೆಟ್ರೋಲ್​ ಮತ್ತು ಡೀಸೆಲ್​ ಮೇಲೆ 2 ರೂಪಾಯಿ ಸಾಮಾಜಿಕ ಭದ್ರತಾ ಸುಂಕ ವಿಧಿಸಿದೆ.

ಇವತ್ತು ಕೇರಳ ವಿಧಾನಸಭೆಯಲ್ಲಿ ಮಂಡನೆಯಾದ ಬಜೆಟ್​ನಲ್ಲಿ ಸುಂಕ ಹೆಚ್ಚಳ ಪ್ರಕಟಿಸಲಾಗಿದೆ.

ಈ ಸುಂಕ ಹೆಚ್ಚಳದಿಂದ ಕೇರಳ ರಾಜ್ಯಕ್ಕೆ 750 ಕೋಟಿ ರೂಪಾಯಿ ಹೆಚ್ಚುವರಿ ಆದಾಯ ನಿರೀಕ್ಷಿಸಲಾಗಿದೆ.

ಸದ್ಯಕ್ಕೆ ಕೇರಳದಲ್ಲಿ ಲೀಟರ್​ ಪೆಟ್ರೋಲ್​ 105 ರೂಪಾಯಿ ಮತ್ತು ಡೀಸೆಲ್​ಗೆ ಲೀಟರ್​ಗೆ 94 ರೂಪಾಯಿ ಇದೆ.

LEAVE A REPLY

Please enter your comment!
Please enter your name here