ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವ ಹೊತ್ತಲ್ಲೇ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಹೆಸರಲ್ಲೇ ನಕಲಿ ವೆಬ್ಸೈಟ್ವೊಂದನ್ನು ತೆರೆಯಲಾಗಿದೆ. ಅಂದಹಾಗೆ ಇದು ಕರ್ನಾಟಕ ಕಾಂಗ್ರೆಸ್ ಪಕ್ಷದ ಅಧಿಕೃತ ವೆಬ್ಸೈಟ್ ಅಲ್ಲ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಬಗ್ಗೆ ಮಾಹಿತಿ ಇರುವ ಅಧಿಕೃತ ವೆಬ್ಸೈಟ್ inckarnataka.in. ಈ ಅಧಿಕೃತ ವೆಬ್ಸೈಟ್ನ್ನು ಈಗ ತೆಗೆದುಹಾಕಲಾಗಿದೆ.
ಬದಲಿಗೆ ಕಾಂಗ್ರೆಸ್ ವೆಬ್ಸೈಟ್ನ್ನೇ ಹೋಲುವ ನಕಲಿ ವೆಬ್ಸೈಟ್. ಈ ನಕಲಿ ವೆಬ್ಸೈಟ್ನ ಲಿಂಕ್ kpcc.in ಕರ್ನಾಟಕ ಪ್ರದೇಶ ಕಾಂಗ್ರೆಸ್ communal, criminal, corrupt ಎಂಬ ಮೂರು ಪದಗಳನ್ನು ಬಳಸಿ ಆ ಶೀರ್ಷಿಕೆಗಳ ಕೆಳಗೆ ಸಿದ್ದರಾಮಯ್ಯ, ಡಿಕೆಶಿವಕುಮಾರ್ ಮತ್ತು ಕೆ ಜೆ ಜಾರ್ಜ್ ಫೋಟೋ ಬಳಸಲಾಗಿದೆ.
ಈ ನಕಲಿ ವೆಬ್ಸೈಟ್ ವಿರುದ್ಧ ತನಿಖೆ ಕೈಗೊಳ್ಳುವಂತೆ ಕಾಂಗ್ರೆಸ್ ಶಾಸಕ ಮತ್ತು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಬೆಂಗಳೂರು ಪೊಲೀಸ್ ಆಯುಕ್ತ ಪ್ರತಾಪ್ಚಂದ್ರ ರೆಡ್ಡಿ ಅವರಿಗೆ ದೂರು ನೀಡಿದ್ದಾರೆ.
ಈ ನಕಲಿ ವೆಬ್ಸೈಟ್ನಲ್ಲಿ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿ ಪಕ್ಷದ ರಾಜ್ಯ ಘಟಕದ ಮುಖ್ಯ ಕಚೇರಿಯ ವಿಳಾಸ ಮತ್ತು ಕಾಂಗ್ರೆಸ್ ಪಕ್ಷದ ಅಧಿಕೃತ ಕಚೇರಿಯ ದೂರವಾಣಿ ಸಂಖ್ಯೆಯನ್ನೇ ನೀಡಲಾಗಿದೆ.
ಈ ನಕಲಿ ವೆಬ್ಸೈಟ್ನಲ್ಲಿ ಕಾಂಗ್ರೆಸ್ ವಿರುದ್ಧದ ಭ್ರಷ್ಟಾಚಾರ, ಅಕ್ರಮ, ಕೋಮುಗಲಭೆಗಳು, ತುಕುಡೆ ತುಕುಡೆ ಗ್ಯಾಂಗ್ ಆರೋಪಗಳು, ಡಿಕೆಶಿವಕುಮಾರ್ ತಿಹಾರ್ ಜೈಲಿಗೆ ಹೋದ ಅಂಶಗಳನ್ನೆಲ್ಲ ಪ್ರಕಟಿಸಲಾಗಿದೆ.
ಈ ವೆಬ್ಸೈಟ್ನ ಮುಖಪುಟದಲ್ಲಿ ಸಿದ್ದರಾಮಯ್ಯ, ಡಿಕೆಶಿವಕುಮಾರ್ ಮತ್ತು ಮಾಜಿ ಸಚಿವ ಕೆ ಜೆ ಜಾರ್ಜ್ ಅವರ ಪೋಟೋವನ್ನು ಬಳಸಲಾಗಿದೆ.
ಅಧ್ಯಕ್ಷರು ಎಂಬ ಒಕ್ಕಣೆಯಲ್ಲಿ ಡಿಕೆಶಿವಕುಮಾರ್ ತಿಹಾರ್ ಜೈಲಿನಲ್ಲಿದ್ದ ಮಾಹಿತಿಯನ್ನು ಪ್ರಕಟಿಸಲಾಗಿದೆ.
ತಿಹಾರ್ ಜೈಲಿನ ಎದುರುಗಡೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿಕೆಶಿವಕುಮಾರ್ ಮತ್ತು ಮಲ್ಲಿಕಾರ್ಜುನ ಖರ್ಗೆ ಇರುವ ಫೋಟೋವನ್ನು ಅಂಟಿಸಲಾಗಿದೆ.
ಮಾದರಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಡಿಕೆಶಿವಕುಮಾರ್, ಮೊಹಮ್ಮದ್ ನಲಪಾಡ್, ವಿನಯ ಕುಲಕರ್ಣಿ, ಕೆ ಜೆ ಜಾರ್ಜ್ ಮತ್ತು ರಮೇಶ್ ಕುಮಾರ್ ಅವರ ಫೋಟೋವನ್ನು ಹಾಕಲಾಗಿದೆ.
ಈ ನಕಲಿ ವೆಬ್ಸೈಟ್ ವಿರುದ್ದ ಕ್ರಮಕೈಗೊಳ್ಳುವಂತೆ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ.
ADVERTISEMENT
ADVERTISEMENT