ಮೋದಿ ನಾಯಕತ್ವ ಮೆಚ್ಚಿ ಬಿಜೆಪಿಗೆ ಬೆಂಬಲ – ಸಂಸದೆ, ಸ್ವಾಭಿಮಾನಿ ಸುಮಲತಾ ಘೋಷಣೆ

ಮಂಡ್ಯ ಲೋಕಸಭಾ ಕ್ಷೇತ್ರದ ಸಂಸದೆ ಸುಮಲತಾ ಅಂಬರೀಶ್​ ಅವರು ಬಿಜೆಪಿಗೆ ಬೆಂಬಲ ಘೋಷಿಸಿದ್ದಾರೆ. ಈ ಮೂಲಕ ಸುಮಲತಾ ಅವರ ಮುಂದಿನ ರಾಜಕೀಯ ನಡೆಗಳ ಬಗ್ಗೆ ಇದ್ದ ಕುತೂಹಲಕ್ಕೆ ಪೂರ್ಣ ವಿರಾಮ ಬಿದ್ದಿದೆ.

ಮಂಡ್ಯದ ಚಾಮುಂಡೇಶ್ವರಿ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಮಾಧ್ಯಮಗಳ ಜೊತೆಗೆ ಮಾತಾಡುವ ವೇಳೆ ಬಿಜೆಪಿಗೆ ಬೆಂಬಲಿಸುವ ತಮ್ಮ ನಿರ್ಧಾರ ಪ್ರಕಟಿಸಿದರು.

ಆದರೆ ಸುಮಲತಾ ಅವರು ಬಿಜೆಪಿಗೆ ಸೇರ್ಪಡೆ ಆಗಲ್ಲ.

ಪಕ್ಷೇತರರಾಗಿ ಗೆದ್ದ ಸಂಸದರು ತಾವು ಗೆದ್ದ 6 ತಿಂಗಳ ಒಳಗಾಗಿ ಯಾವುದಾದರೂ ಪಕ್ಷಕ್ಕೆ ಸೇರ್ಪಡೆ ಆಗಲು ಅವಕಾಶ ಇದೆ. ಆದರೆ ಆ ಬಳಿಕ ಸೇರ್ಪಡೆಯಾದರೆ ಸಂಸದ ಸ್ಥಾನದಿಂದ ಅನರ್ಹರಾಗ್ತಾರೆ.

ಈ ನಿಯಮದ ಬಗ್ಗೆ ಉಲ್ಲೇಖಿಸಿರುವ ಸಂಸದೆ ಸುಮಲತಾ ಬಿಜೆಪಿಗೆ ಸೇರ್ಪಡೆ ಆಗಲು ಕಾನೂನು ತೊಡಕಿದೆ. ಆದರೆ ನನ್ನ ಬೆಂಬಲ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವಕ್ಕೆ ಮತ್ತು ಬಿಜೆಪಿಗೆ ಇರಲಿದೆ ಎಂದು ಪ್ರಕಟಿಸಿದ್ದಾರೆ.

ಕೆಲ ತಿಂಗಳ ಹಿಂದೆಯಷ್ಟೇ ಸುಮಲತಾ ಅವರ ಆಪ್ತ ಸಚ್ಚಿದಾನಂದ ಅವರು ಬಿಜೆಪಿ ಸೇರ್ಪಡೆ ಆಗಿದ್ದರು.

ರಾಜಕಾರಣ ಬಿಡ್ತೀನಿ ಆದರೆ ಸ್ವಾಭಿಮಾನ ಬಿಡಲ್ಲ, ಪ್ರಾಣ ಬಿಡ್ತೀನಿ ಆದರೆ ಮಂಡ್ಯ ಬಿಡಲ್ಲ ಎಂದು ಹೇಳುವ ಮೂಲಕ ಮಂಡ್ಯ ಜಿಲ್ಲೆ ಹೊರತುಪಡಿಸಿ ಬೇರೆ ಕಡೆ ಸ್ಪರ್ಧಿಸಲ್ಲ ಎಂದು ಸ್ಪಷ್ಟಪಡಿಸಿದರು.

ನಾನು ರಾಜಕಾರಣದಲ್ಲಿ ಇರುವವರೆಗೆ ಮಗ ಅಭಿಷೇಕ್​ ಅಂಬರೀಶ್​ ರಾಜಕೀಯಕ್ಕೆ ಬರಲ್ಲ. ನಾನು ಕುಟುಂಬ ರಾಜಕಾರಣ ಮಾಡಲ್ಲ. ಬೇರೆ ಪಕ್ಷದಲ್ಲಿ ಕುಟುಂದವರು ಲೈನ್​ನಲ್ಲಿ ಇರ್ತಾರೆ ಎಂದು ಪರೋಕ್ಷವಾಗಿ ವಿರೋಧಿ ಜೆಡಿಎಸ್​​ಗೆ ಮೊಟಕಿದರು.

LEAVE A REPLY

Please enter your comment!
Please enter your name here