ಸೆಲ್ಫಿ ಗಲಾಟೆ – ಕ್ರಿಕೆಟಿಗ ಪೃಥ್ವಿ ಶಾಹಾ ಮೇಲೆ ಹಲ್ಲೆ – ಯುವತಿ ಸೇರಿ 8 ಮಂದಿ ಬಂಧನ

ಸೆಲ್ಫಿ ತೆಗೆದುಕೊಳ್ಳಲು ಬಿಡಲಿಲ್ಲ ಎಂಬ ಕಾರಣಕ್ಕೆ ಕ್ರಿಕೆಟಿಗ ಪ್ರಥ್ವಿ ಶಾಹಾ ಮೇಲೆ ಸಪ್ನಾಗಿಲ್​ ಮತ್ತು ಆಕೆಯ ಸ್ನೇಹಿತರು ಹಲ್ಲೆ ನಡೆಸಿದ್ದಾರೆ.
ಕ್ರಿಕೆಟಿಗ ಪೃಥ್ವಿ ಶಾಹಾ ಕೊಟ್ಟ ದೂರಿನ ಮೇಲೆ ಸಪ್ನಾಗಿಲ್​ ಮತ್ತು ಆಕೆಯ ಗೆಳಯರು ಒಳಗೊಂಡಂತೆ ಒಟ್ಟು 8 ಮಂದಿಯನ್ನು ಬಂಧಿಸಲಾಗಿದೆ.
ಪೃಥ್ವಿ ಶಾಹಾ ಅವರು ನಿನ್ನೆ ಮುಂಬೈನಲ್ಲಿರುವ ಫೈವ್​ ಸ್ಟಾರ್​ವೊಂದಕ್ಕೆ ರಾತ್ರಿ ಊಟಕ್ಕೆ ಹೋಗಿದ್ದರು.
ಈ ವೇಳೆ ಊಟದ ಟೇಬಲ್​ ಬಳಿ ಬಂದ ಇಬ್ಬರು ಸೆಲ್ಫಿಗೆ ಮುಂದಾದರು. ಅದಕ್ಕೆ ಪೃಥ್ವಿ ಶಾಹಾ ಒಪ್ಪಿಕೊಂಡರು. ಆದರೆ ಮತ್ತೆ ವಾಪಸ್​ ಬಂದ ಆ ಗುಂಪು ಸೆಲ್ಫಿಗೆ ಬೇಡಿಕೆ ಇಟ್ಟರು.
ಆದರೆ ಆಗ ಪೃಥ್ವಿ ಶಾಹಾ ಸೆಲ್ಫಿಗೆ ಒಪ್ಪಲಿಲ್ಲ. ನಾವು ಊಟಕ್ಕೆ ಬಂದಿದ್ದೇವೆ ಎಂದು ಹೇಳಿ ನಿರಾಕರಿಸಿದರು.
ಈ ವೇಳೆ ಕ್ರಿಕೆಟಿಗನ ಜೊತೆಗಿದ್ದ ಸ್ನೇಹಿತರು ಹೋಟೆಲ್​ ಮ್ಯಾನೇಜರ್​ರನ್ನು ಕರೆದರು. ಆ ಮ್ಯಾನೇಜರ್​ ಆ ಗುಂಪನ್ನು ಹೋಟೆಲ್​ ಬಿಟ್ಟು ತೆರಳುವಂತೆ ಸೂಚಿಸಿದರು.
ಊಟ ಮುಗಿಸಿಕೊಂಡು ಹೊರಬರುತ್ತಿದ್ದಂತೆ ಕಾಯುತ್ತಿದ್ದ ಆ ಗುಂಪು ಪೃಥ್ವಿ ಶಾಹಾ ಮೇಲೆ ಬೇಸ್​ಬಾಲ್​ ಬ್ಯಾಟ್​ನಿಂದ ಹಲ್ಲೆಗೆ ಮುಂದಾಯಿತು.
ಪೃಥ್ವಿ ಶಾಹಾ ಕಾರಿನ ಮುಂಭಾಗದ ಮತ್ತು ಹಿಂಭಾಗದ ಕನ್ನಡಿಯನ್ನು ಹೊಡೆದುಹಾಕಿದರು. ಪೃಥ್ವಿ ಶಾಹಾ ಮೇಲೆ ಬೇಸ್​ಬಾಲ್​ ಬ್ಯಾಟ್​ನಿಂದ ಸಪ್ನಾ ಗಿಲ್​ ಹಲ್ಲೆಗೆ ಯತ್ನಿಸಿರುವ ವೀಡಿಯೋ ಲಭ್ಯವಾಗಿದೆ.
ಆ ಬಳಿಕ ಪೃಥ್ವಿ ಶಾಹಾ ಸ್ನೇಹಿತರ ಇನ್ನೊಂದು ಕಾರಿನಲ್ಲಿ ತೆರಳಿದರು. ಆದರೆ ಬೈಕ್​ ಮತ್ತು ಕಾರಿನಲ್ಲಿ ಸ್ನೇಹಿತರೊಂದಿಗೆ ಬೆನ್ನಟ್ಟಿದ್ದ ಸಪ್ನಾ ಗಿಲ್​ ಪೃಥ್ವಿ ಶಾಹಾ ಬಗ್ಗೆ ಕೆಟ್ಟದಾಗಿ ಮಾತಾಡಿದಳು.
ಅಲ್ಲದೇ 50 ಸಾವಿರ ರೂಪಾಯಿ ಕೊಡುವಂತೆ ಇಲ್ಲವಾದಲ್ಲಿ ಸುಳ್ಳು ಕೇಸ್​ ಹಾಕುವುದಾಗಿ ಆಕೆ ಬೆದರಿಸಿದ್ದಳು ಎಂದೂ ಪೃಥ್ವಿ ಶಾಹಾ ಕೊಟ್ಟ ದೂರಿನಲ್ಲಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here