ಸಿ ಟಿ ರವಿಗೆ ಆಘಾತ – ಪ್ರಮುಖ ಲಿಂಗಾಯತ ಮುಖಂಡ ರಾಜೀನಾಮೆ – ಕಾಂಗ್ರೆಸ್​ನಿಂದ ಟಿಕೆಟ್​ ಸಾಧ್ಯತೆ

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಚಿಕ್ಕಮಗಳೂರು ಕ್ಷೇತ್ರದ ಶಾಸಕ ಸಿ ಟಿ ರವಿ ಅವರ ಕ್ಷೇತ್ರದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ ನಡೆದಿದೆ.
ಚಿಕ್ಕಮಗಳೂರು ಜಿಲ್ಲಾ ಘಟಕಗಳ ಸಂಯೋಜಕ ಹೆಚ್​ ಡಿ ತಮ್ಮಯ್ಯ ಅವರು ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ.
ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯ ಪ್ರಮುಖ ಮುಖಂಡರಾಗಿರುವ ತಮ್ಮಯ್ಯ ಅವರ ರಾಜೀನಾಮೆಯಿಂದ ಬಿಜೆಪಿಗೆ ಕ್ಷೇತ್ರದಲ್ಲಿ ಹೊಸ ತಲೆನೋವು ಶುರುವಾಗಿದೆ.
ರಾಜೀನಾಮೆ ಪತ್ರವನ್ನು ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮರುಡಪ್ಪ ಅವರಿಗೆ ಸಲ್ಲಿಸಿದ್ದಾರೆ. ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೂ ಅವರು ರಾಜೀನಾಮೆ ನೀಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಪ್ರಮುಖ ಬಿಜೆಪಿ ಮುಖಂಡ, ಹೆಚ್​ ಡಿ ತಮ್ಮಯ್ಯ 
ಹೆಚ್​ ಡಿ ತಮ್ಮಯ್ಯ ಅವರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಅವರ ಜೊತೆಗೆ ಸಂಪರ್ಕದಲ್ಲಿದ್ದಾರೆ ಮತ್ತು ಒಂದು ವೇಳೆ ಕಾಂಗ್ರೆಸ್​ನಲ್ಲಿ ಟಿಕೆಟ್​ ಸಿಗುವುದಾದರೆ ಕಾಂಗ್ರೆಸ್​ ಸೇರ್ಪಡೆ ಬಗ್ಗೆಯೂ ಚರ್ಚಿಸಿದ್ದಾರೆ ಎಂದು ಕೆಲ ದಿನಗಳ ಹಿಂದೆ ವರದಿಯಾಗಿತ್ತು.
ಕಳೆದ 15 ವರ್ಷಗಳಿಂದ ಡಿ ತಮ್ಮಯ್ಯ ಅವರು ಬಿಜೆಪಿಯಲ್ಲಿ ಕೆಲಸ ಮಾಡಿದ್ದರು. 2008ರಲ್ಲಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಸಿ ಟಿ ರವಿ ಅವರ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಚಿಕ್ಕಮಗಳೂರು ಬಿಜೆಪಿ ಅಧ್ಯಕ್ಷರಾಗಿದ್ದ ಇವರು ನಾಲ್ಕು ಬಾರಿ ಚಿಕ್ಕಮಗಳೂರು ನಗರಸಭೆಯ ಸದಸ್ಯರೂ ಆಗಿದ್ದರು.
ಲಿಂಗಾಯತ ಮತಗಳೇ ನಿರ್ಣಾಯಕ:
ಚಿಕ್ಕಮಗಳೂರು ಕ್ಷೇತ್ರದಲ್ಲಿಒಕ್ಕಲಿಗ ಸಮುದಾಯಕ್ಕೆ ಸೇರಿದ ಸಿ ಟಿ ರವಿ ಅವರೇ 2004ರಿಂದ ಶಾಸಕರಾಗಿ ಗೆದ್ದು ಬಂದಿದ್ದಾರೆ. ಕಳೆದ 19 ವರ್ಷಗಳಿಂದ ಇವರೇ ಈ ಕ್ಷೇತ್ರದ ಶಾಸಕರು. ಕಾಂಗ್ರೆಸ್​ ಇಲ್ಲಿ ಕೊನೆಯ ಬಾರಿ ಗೆದ್ದಿದ್ದು 1999ರಲ್ಲಿ. 
ಕ್ಷೇತ್ರದಲ್ಲಿರುವ ಜಾತಿವಾರು ಮತಗಳ ಲೆಕ್ಕಾಚಾರಕ್ಕೆ ಬಂದ್ರೆ ಕುರುಬರು 35 ಸಾವಿರ ಜನಸಂಖ್ಯೆ ಇದ್ದಾರೆ ಮತ್ತು ಮುಸಲ್ಮಾನರು 31 ಸಾವಿರ. ಒಕ್ಕಲಿಗ ಮತಗಳು 14 ಸಾವಿರ. ಲಿಂಗಾಯತ ಮತಗಳು 34 ಸಾವಿರ.
ಪರಿಶಿಷ್ಟ ಜಾತಿ ಸಮುದಾದಯವರ ಮತಗಳು 40 ಸಾವಿರ ಮತ್ತು ಎಸ್​ಟಿ ಸಮುದಾಯದವರ ಮತಗಳು 5 ಸಾವಿರ ಇದೆ.
2008ರಲ್ಲಿ ಕಾಂಗ್ರೆಸ್​ ಈ ಕ್ಷೇತ್ರದಿಂದ ಲಿಂಗಾಯತ ಸಮುದಾಯದ ಕೆ ಬಿ ಮಲ್ಲಿಕಾರ್ಜುನ ಅವರಿಗೆ ಕಾಂಗ್ರೆಸ್​ ಟಿಕೆಟ್​ ನೀಡಿತ್ತು. ಅದಾದ ಬಳಿಕ ನಡೆದ ಮೂರು ಚುನಾವಣೆಯಲ್ಲೂ ಒಕ್ಕಲಿಗ ಸಮುದಾಯವರಿಗೆ ಟಿಕೆಟ್​ ನೀಡಿದೆ.
2008ರಲ್ಲಿ ಸಿಟಿ ರವಿ ಅವರ ಗೆಲುವಿಗೆ ಕಾರಣವಾಗಿದ್ದ ಯಡಿಯೂರಪ್ಪ ಅವರ ಪರ ಇದ್ದ ಅಲೆ ಲಿಂಗಾಯತ ಮತಗಳೂ ಸಿಟಿ ರವಿ ಅವರ ಪರ ವಾಲಿದ್ದರಿಂದ ಬಿಜೆಪಿ ಗೆಲುವು ಸುಲಭವಾಗಿತ್ತು.

LEAVE A REPLY

Please enter your comment!
Please enter your name here