Health Tips – ಈ  ಚಿಕ್ಕ ಚಿಕ್ಕ ಕೆಲಸಗಳೇ ನಿಮ್ಮ ಆರೋಗ್ಯಕ್ಕೆ ಸಂಜೀವಿನಿ.. ಮರೆಯದಿರಿ

ಕೆಲವು  ಕೆಲಸಗಳು  ಮಾಡೋದಕ್ಕೆ ತುಂಬಾ ಚಿಕ್ಕದು  ಎನಿಸುತ್ತದೆ. ಆ  ಕೆಲಸ  ಮಾಡೋದನ್ನು ಅಭ್ಯಾಸ ಮಾಡಿಕೊಂಡಲ್ಲಿ ನಿಮಗೆ ಮತ್ತು ನಿಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನ ಆಗುತ್ತದೆ. ಅವು ಏನು ಎಂಬುದನ್ನು ನೋಡೋಣ.

#ಮನೆಯ ಸನಿಹದಲ್ಲಿ ಇರುವ  ಶಾಪ್(Shop), ಮಾರ್ಕೆಟ್ (Market)ಗೆ ಕೂಡ  ನಾವು ಬೈಕಲ್ಲಿ (Byke)ಹೋಗುತ್ತೇವೆ. ಹೀಗೆ ಮಾಡದೇ ನೀವು  ಕಾಲ್ನಡಿಗೆ (Walking)ಮೂಲಕ ಹೋಗಿ ಬಂದಲ್ಲಿ, ಅದು ನಿಮ್ಮ ಆರೋಗ್ಯಕ್ಕೆ (Health)ಒಳಿತು ಮಾಡುತ್ತದೆ. ಜೊತೆಗೆ ದ್ವಿಚಕ್ರ ವಾಹನದ (Bicycle)ಇಂಧನ (Fuel)ಕೂಡ ಉಳಿತಾಯ (Save) ಮಾಡಿದಂತೆ ಆಗುತ್ತದೆ.

# ನೀವು  ಕೆಲಸ ಮಾಡುವ  ಕಚೇರಿ (Office) ಮೇಲ್ ಅಂತಸ್ತಿನಲ್ಲಿ ಇದ್ದಲ್ಲಿ ಲಿಫ್ಟ್ (Lift)ಬಳಸದೆ ಮೆಟ್ಟಿಲು (Staircase/Steps)ಉಪಯೋಗಿಸಿ.. ಏಕೆಂದರೆ ಮೆಟ್ಟಿಲು ಹತ್ತುವುದು, ಇಳಿಯುವುದು ವ್ಯಾಯಾಮಕ್ಕೆ ಸಮ. ವ್ಯಾಯಾಮ (Exercise) ಮಾಡಿದಲ್ಲಿ ಯಾವುದೆಲ್ಲಾ ಒಳಿತಾಗುವುದೋ, ಇದರಲ್ಲಿಯೂ ಅದೇ ಫಲಿತಾಂಶ ದಕ್ಕುತ್ತದೆ.

# ಎಷ್ಟೇ ಮುಖ್ಯ ಕೆಲಸ  ಇದ್ದರೂ ಗಂಟೆಗಟ್ಟಲೇ ಕುಳಿತೇ ಇರಬೇಡಿ. ಹೀಗೆ  ಮಾಡುವುದರಿಂದ ಅನೇಕ ಸಮಸ್ಯೆಗಳು ತಲೆದೂರುತ್ತವೆ. ಕನಿಷ್ಠ ಎರಡು  ಗಂಟೆಗೆ  ಒಮ್ಮೆಯಾದರು ಎದ್ದು ನಡೆದಾಡಬೇಕು. ಮೈಯನ್ನು ಆಚೆ ಈಚೆ ತಿರುಗಿಸಬೇಕು. ಆಗ ದೇಹಕ್ಕೆ (Body)ಸ್ವಲ್ಪ ರಿಲೀಫ್ ಸಿಗುತ್ತದೆ.

# ಪ್ರತಿ ನಿತ್ಯ ಸ್ವಲ್ಪ ಹೊತ್ತಾದರೂ ಬಿಸಿಲಿಗೆ (SunRays)ಮೈಯೊಡ್ಡಿ. ಹೀಗೆ  ಮಾಡುವುದರಿಂದ ವೈಟಮಿನ್ – ಡಿ (Vitamin D) ಲೋಪ ಉಂಟಾಗದಂತೆ ನಮ್ಮನ್ನು ನಾವು ಕಾಪಾಡಿಕೊಳ್ಳಬಹುದು. ಇಲ್ಲ ಅಂದರೇ, ಮೂಳೆಗಳು  (Bone) ಬಲಹೀನಗೊಂಡು ಹಲವು ಸಮಸ್ಯೆ ಕಾಣಿಸಿಕೊಳ್ಳುತ್ತವೆ.

# ವಾಕಿಂಗ್, ಜಾಗಿಂಗ್, ಸೈಕಲಿಂಗ್.. (Walking, Jogging, Cycling) ಈ ಮೂರರಲ್ಲಿ ಯಾವುದನ್ನು ಬೇಕಿದ್ದರೂ ಆಯ್ಕೆ ಮಾಡಿಕೊಳ್ಳಿ. ಅದಕ್ಕೆ ಕನಿಷ್ಠ 30ನಿಮಿಷ  ವಿನಿಯೋಗಿಸಿ. ಕ್ರಮವಾಗಿ ನಿಮ್ಮ ಫಿಟ್ ನೆಸ್ (Fitness)ನಲ್ಲಿ ಆಗುವ  ಬದಲಾವಣೆಗಳು ನಿಮ್ಮ ಅರಿವಿಗೆ ಬರುತ್ತವೆ.

# ಮನುಷ್ಯ ಪ್ರಶಾಂತವಾಗಿ ಇರಲು ಏಕಾಂತ ಬಯಸುವುದು ತಪ್ಪಲ್ಲ. ಆದರೆ, ದಿನವಿಡೀ  ಒಂಟಿ ಆಗಿರುವುದರಿಂದ ಮಾನಸಿಕ ಒತ್ತಡ, ಖಿನ್ನತೆಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಸಾಧ್ಯವಾದಷ್ಟು ನಾಲ್ವರ ಜೊತೆ ಬೇರೆಯಿರಿ.

# ಮನುಷ್ಯನಿಗೆ  ನಿದ್ದೆ (Sleeping)ಅತ್ಯಗತ್ಯ. ಚನ್ನಾಗಿ  ನಿದ್ದೆ ಮಾಡಿದಲ್ಲಿ ಮಾತ್ರ ಮರುದಿನಕ್ಕೆ ದೇಹ ಉತ್ತೇಜನಗೊಳ್ಳುತ್ತದೆ. ದಿನಕ್ಕೆ ಕನಿಷ್ಠ ಆರರಿಂದ ಎಂಟು ಗಂಟೆ  ಕಡ್ಡಾಯವಾಗಿ ನಿದ್ದೆ ಮಾಡಿ ಆರೋಗ್ಯವಾಗಿರಿ.

# ಎಷ್ಟೇ ಕೆಲಸಗಳು ಇದ್ದರೂ ಬೆಳಗ್ಗೆ ಉತ್ತಮವಾದ ಅಲ್ಪಹಾರ (Healthy breakfast)ಸೇವನೆ ಮಾಡಲು ಮರೆಯದಿರಿ. ವ್ಯಾಯಾಮ ಸುನಾಯಾಸವಾಗಿ ಮಾಡಬೇಕೆಂದರೂ, ದಿನವಿಡೀ ಚುರುಕಾಗಿ ಇರಬೇಕು ಎಂದಿದ್ದರೆ ಶಕ್ತಿಯುತವಾದ ಅಲ್ಪಹಾರವನ್ನು ಸೇವನೆ ಮಾಡಬೇಕು.

# ಉಪಹಾರ, ಊಟಕ್ಕೆ ಎಂದು ನಿರ್ದಿಷ್ಟ ಸಮಯ ಗೊತ್ತು ಮಾಡಿಕೊಳ್ಳಿ. ಯಾವಾಗ ಬೇಕೋ ಆಗ ತಿನ್ನುವ ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಜೀರ್ಣ ಪ್ರಕ್ರಿಯೆ ಸರಿಯಾಗಿ ಆಗುತ್ತದೆ. ಗ್ಯಾಸ್ಟ್ರಿಕ್ (Gastritis)ಉಂಟಾಗುವುದಿಲ್ಲ.

# ಮಸಾಲೆ ಮತ್ತು ಎಣ್ಣೆ ಪದಾರ್ಥಗಳನ್ನು ಹೆಚ್ಚು ಸೇವಿಸಬೇಡಿ. ಅದರ  ಬದಲು ತರಕಾರಿ, ಹಣ್ಣು (Fruit’s, Vegetables)ಗಳನ್ನು ಹೆಚ್ಚಾಗಿ ಸೇವನೆ ಮಾಡಿ.

# ನಿಮ್ಮ ಹೆಂಡತಿ, ಮಕ್ಕಳು, ಅಪ್ಪ ಅಮ್ಮ (Wife, Children, Father, Mother),ಸಾಕು  ಪ್ರಾಣಿಗಳ(Pet animals) ಜೊತೆ ಬೆರೆತು ಖುಷಿ ಪಡಿ. ಇದಕ್ಕೆ ಎಂದು ಸ್ವಲ್ಪ ಸಮಯ  ವಿನಿಯೋಗಿಸಿ.

#ಎಲ್ಲದಕ್ಕಿಂತ ಮುಖ್ಯ.. ಮೊಬೈಲ್ (Mobile)ದಾಸರಾಗಬೇಡಿ. ಸ್ವಲ್ಪ ಹೊತ್ತು ಮೊಬೈಲ್ ಪಕ್ಕಕ್ಕಿಟ್ಟು, ಕುಟುಂಬಸ್ಥರ  ಜೊತೆ ಬೇರೆಯಿರಿ.

LEAVE A REPLY

Please enter your comment!
Please enter your name here