ಕೋಲಾರ: ಖಾಸಗಿ ಬಸ್​ ಅಪಘಾತ – ಗಂಡ, ಹೆಂಡತಿ ಸಾವು, ಕಂಡಕ್ಟರ್​, ಡ್ರೈವರ್​ ಪರಾರಿ

Kolar Bus Accident
ಕೋಲಾರದಲ್ಲಿ (Kolar) ಖಾಸಗಿ ಬಸ್​ ಪಲ್ಟಿ ಆಗಿ ಗಂಡ ಹೆಂಡತಿ ಇಬ್ಬರೂ ಸಾವನ್ನಪ್ಪಿದ್ದಾರೆ.
ಅಪಘಾತದ ಬಳಿಕ ಬಸ್​​ನ ಡ್ರೈವರ್​ ಮತ್ತು ಕಂಡಕ್ಟರ್​ ಇಬ್ಬರೂ ಪರಾರಿ ಆಗಿದ್ದಾರೆ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ರಾಷ್ಟ್ರೀಯ ಹೆದ್ದಾರಿ -75ರ ವಿರೂಪಾಕ್ಷಿ ಗೇಟ್​ ಬಳಿ ಅಪಘಾತ ಸಂಭವಿಸಿದೆ.
ಈ ಬಸ್​ ಆಂಧ್ರ (Andra) ದ ಗುಂಟೂರಿನಿಂದ (Gunturu) ಬೆಂಗಳೂರಿಗೆ (Bengaluru) ಬರುತ್ತಿತ್ತು.
ಬಸ್​ನಲ್ಲಿ ಮೂವತ್ತು ಮಂದಿ ಪ್ರಯಾಣಿಕರಿದ್ದರು.
ಮೃತ ದಂಪತಿಯನ್ನು ಷರೀಫ್​ ಮತ್ತು ಮೈಮುನ್ನಿಸಾ ಎಂದು ಗುರುತಿಸಲಾಗಿದೆ.
ಆಂಧ್ರದ ನೆಲ್ಲೂರಿನ ಮೇಮೂರಿ-ಕಾವೇರಿ ಟ್ರಾವೆಲ್ಸ್​ಗೆ ಸೇರಿದ ಬಸ್​ ಇದಾಗಿದೆ.

LEAVE A REPLY

Please enter your comment!
Please enter your name here