ಖ್ಯಾತ ಗಾಯಕಿ ವಾಣಿ ಜಯರಾಂ ನಿಧನ

ಕನ್ನಡ ಒಳಗೊಂಡಂತೆ ಬಹುಭಾಷೆಗಳ ಸಿನಿಮಾದಲ್ಲಿ ಹಿನ್ನೆಲೆ ಗಾಯನ ಮೂಲಕ ಮನೆಮಾತಾಗಿದ್ದ ಖ್ಯಾತ ಗಾಯಕಿ ವಾಣಿ ಜಯರಾಂ ಇನ್ನಿಲ್ಲ.

78 ವರ್ಷದ ಅವರು ಚೆನ್ನೈನಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

ಇದೇ ವರ್ಷ ಇವರಿಗೆ ಕೇಂದ್ರ ಸರ್ಕಾರ ಪದ್ಮಭೂಷಣ ಪ್ರಶಸ್ತಿ ಘೋಷಿಸಿ ಗೌರವಿಸಿತ್ತು. ಇವರು 10 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡುವ ಮೂಲಕ ಮನೆಮಾತಾಗಿದ್ದರು.

ಕನ್ನಡದಲ್ಲಿ ಕೆಸರಿನ ಕಮಲ, ಉಪಾಸನೆ, ಹೊಸ ಬೆಳಕು, ಬಿಳಿ ಹೆಂಡ್ತಿ ಹೀಗೆ ಹಲವು ಸಿನಿಮಾಗಳಲ್ಲಿ ಹಾಡಿದ್ದರು. ಇವರು ಕನ್ನಡದಲ್ಲಿ ಒಟ್ಟು 600 ಸಿನಿಮಾ ಹಾಡುಗಳನ್ನು ಹಾಡಿ ಪ್ರಸಿದ್ಧಿ ಪಡೆದಿದ್ದರು.

ವಾಣಿ ಜಯರಾಂ ಹಾಡಿರುವ ಕನ್ನಡದ ಪ್ರಮುಖ ಜನಪ್ರಿಯ ಗೀತೆಗಳು:

ಮಧುಮಾಸ ಚಂದ್ರಮ, ಈ ಶತಮಾನದ ಮಾದರಿ ಹೆಣ್ಣು, ಬೆಸುಗೆ ಬೆಸುಗೆ, ಬೆಳ್ಳಿ ಮೋಡವೇ ಎಲ್ಲಿ ಓಡುವೆ, ಜೀವನ ಸಂಜೀವನ, ಕನ್ನಡ ನಾಡಿನ ಕರಾವಳಿ, ಪ್ರಿಯತಮ ಕರುಣೆಯ ತೋರೇಯ, ಸದಾ ಕಣ್ಣಲಿ ಪ್ರಣಯದ, ಎಂದೆಂದೂ ನಿನ್ನನ್ನು ಮರೆತು, ಹೋದೆಯ ದೂರ ಓ ಜೊತೆಗಾರ, ದೇವ ಮಂದಿರದಲ್ಲಿ, ಹಾಡು ಹಳೆಯದಾದರೇನು, ಭಾವವೆಂಬ ಹೂವು ಅರಳಿ.

ತಮಿಳು, ಕನ್ನಡ, ಹಿಂದಿ, ತೆಲುಗು, ಮಲಯಾಳಂ, ಮರಾಠಿ, ಒಡಿಯಾ, ಗುಜರಾತಿ, ಹರಿಯಾಣ್ವಿ, ಅಸ್ಸಾಮಿ, ತುಳು ಮತ್ತು ಬೆಂಗಾಳಿ ಭಾಷೆಯ ಸಿನಿಮಾಗಳಲ್ಲಿ ವಾಣಿ ಜಯರಾಂ ಅವರು ಕಂಠದಾನ ಮಾಡಿದ್ದಾರೆ.

LEAVE A REPLY

Please enter your comment!
Please enter your name here