ಕರ್ನಾಟಕದಲ್ಲಿ ದೇಶದ ಅತೀ ದೊಡ್ಡ ಹೆಲಿಕಾಪ್ಟರ್​ ತಯಾರಿಕಾ ಕೇಂದ್ರ ಉದ್ಘಾಟಿಸಲಿರುವ ಪ್ರಧಾನಿ ಮೋದಿ

ಕರ್ನಾಟಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದಲ್ಲೇ ಅತೀ ದೊಡ್ಡ ಹೆಲಿಕಾಪ್ಟರ್​ ತಯಾರಿಕಾ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ.

ಸೋಮವಾರ ಅಂದರೆ ಫೆಬ್ರವರಿ 6ರಂದು ತುಮಕೂರಲ್ಲಿರುವ ಹಿಂದೂಸ್ತಾನ್​ ಏರೋನಾಟಿಕ್ಸ್​ ಲಿಮಿಟೆಡ್​​ನಲ್ಲಿ ಗ್ರೀನ್​ಫೀಲ್ಡ್​ ಹೆಲಿಕಾಪ್ಟರ್​​ ತಯಾರಿಕಾ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ.

ರಕ್ಷಣಾ ಕ್ಷೇತ್ರದಲ್ಲಿ ಆತ್ಮನಿರ್ಭರದತ್ತ ಮಹತ್ವದ ಹೆಜ್ಜೆ ಎಂದು ಬಣ್ಣಿಸಲಾಗಿರುವ  615 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಹೆಚ್​​ಎಎಲ್​ನ ಈ ಕೇಂದ್ರ ಭಾರತದಲ್ಲೇ ಅತೀ ದೊಡ್ಡ ಹೆಲಿಕಾಪ್ಟರ್​ ತಯಾರಿಕಾ ಕೇಂದ್ರವಾಗಲಿದೆ.

20 ವರ್ಷಗಳ ಅವಧಿಯಲ್ಲಿ ಹೆಚ್​ಎಎಲ್​ 3ರಿಂದ 15 ಟನ್​ ಭಾರದ 1 ಸಾವಿರಕ್ಕೂ ಅಧಿಕ ಹೆಲಿಕಾಪ್ಟರ್​ಗಳನ್ನು ತಯಾರಿಸಲಿದೆ.

ಜೊತೆಗೆ 20 ವರ್ಷಗಳಲ್ಲಿ 4 ಲಕ್ಷ ಕೋಟಿ ರೂಪಾಯಿ ವ್ಯವಹಾರ ಆಗಲಿದೆ ಎಂದು ಅಂದಾಜಿಸಲಿದೆ.

ಈ ಕೇಂದ್ರಕ್ಕೆ 2016ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರೇ ಶಂಕುಸ್ಥಾಪನೆ ನೆರವೇರಿಸಿದ್ದರು.

ವರ್ಷಕ್ಕೆ ಈ ಕೇಂದ್ರದಲ್ಲಿ 30 ಹೆಲಿಕಾಪ್ಟರ್​ಗಳನ್ನು ಉತ್ಪಾದಿಸಲಾಗುತ್ತದೆ. ಬಳಿಕ ಈ ಉತ್ಪಾದನಾ ಸಾಮರ್ಥ್ಯವನ್ನು ವರ್ಷಕ್ಕೆ 60 ರಿಂದ 90 ಹೆಲಿಕಾಪ್ಟರ್​ಗಳ ಉತ್ಪಾದನೆಗೆ ವರ್ಧಿಸಲಾಗುತ್ತದೆ.

ಈ ಕೇಂದ್ರದಲ್ಲಿ ಲಘು ಯುದ್ಧ ಹೆಲಿಕಾಪ್ಟರ್​, ಭಾರತದ ಬಹುಉದ್ದೇಶಿತ ಹೆಲಿಕಾಪ್ಟರ್​ಗಳನ್ನು ಉತ್ಪಾದಿಸಲಾಗುತ್ತದೆ.

ಹೆಲಿಕಾಪ್ಟರ್​ಗಳ ಉತ್ಪಾದನೆ ಜೊತೆಗೆ ಲಘು ಯುದ್ಧ ಹೆಲಿಕಾಪ್ಟರ್​ಗಳು, ಲಘು ಬಳಕೆ ಹೆಲಿಕಾಪ್ಟರ್​​ಗಳು, ಸುಧಾರಿತ ಲಘು ಹೆಲಿಕಾಪ್ಟರ್​ಗಳು, ಭಾರತ ಬಹು ಉದ್ದೇಶಿತ ಹೆಲಿಕಾಪ್ಟರ್​ಗಳ ದುರಸ್ತಿ ಮತ್ತು ನಿರ್ವಹಣೆಯ ಸೇವೆಯನ್ನೂ ಈ ಕೇಂದ್ರದಲ್ಲಿ ನೀಡಲಾಗುತ್ತದೆ.

LEAVE A REPLY

Please enter your comment!
Please enter your name here