ಸೌದಿ ಅರೇಬಿಯಾದಲ್ಲಿ ಒಂಟೆಗೆ ಕಾರು ಡಿಕ್ಕಿ ಆಗಿ ದಕ್ಷಿಣ ಕನ್ನಡ ಜಿಲ್ಲೆಯ ಮೂವರು ಸಾವನ್ನಪ್ಪಿದ್ದಾರೆ.
ಸೌದಿ ಅರೇಬಿಯಾದ ರಿಯಾದ್ ಪ್ರಾಂತ್ಯದ ಖುರೈಸ್ನಲ್ಲಿ ರಸ್ತೆ ದಾಟುತ್ತಿದ್ದ ಒಂಟೆಗೆ ಕಾರು ಡಿಕ್ಕಿ ಆಗಿದೆ.
ಕಾರಿನಲ್ಲಿದ್ದ ಹಳೆಯಂಗಡಿ ಬಳಿಯ ಕದಿಕೆ ನಿವಾಸಿ 23 ವರ್ಷದ ರಿಜ್ವಾನ್, ಸುರತ್ಕಲ್ನ ಕೃಷ್ಣಾಪುರದ ಶಿಹಾಬ್ ಮತ್ತು ಮಂಗಳೂರಿನ ಬೆಂಗರೆ ನಿವಾಸಿ ಅಕೀಲ್ ಮೃತಪಟ್ಟಿದ್ದಾರೆ.
ಇವರ ಜೊತೆಗಿದ್ದ ಬಾಂಗ್ಲಾದೇಶದ ನಾಸೀರ್ ಕೂಡಾ ಸಾವನ್ನಪ್ಪಿದ್ದಾರೆ.
ರಿಜ್ವಾನ್ ನಾಲ್ಕು ತಿಂಗಳ ಹಿಂದೆಯಷ್ಟೇ ಉದ್ಯೋಗಕ್ಕಾಗಿ ಸೌದಿ ಅರೇಬಿಯಾಕ್ಕೆ ಹೋಗಿದ್ದರು.
ರಾತ್ರಿ ವೇಳೆ ಕೆಲಸಕ್ಕೆ ತೆರಳುವ ವೇಳೆ ಹಠಾತ್ತನೇ ಒಂಟೆಯೊಂದು ಕಾರಿಗೆ ಅಡ್ಡಬಂದಿದೆ. ಈ ವೇಳೆ ಕಾರು ನಿಯಂತ್ರಣ ತಪ್ಪಿ ಅಪಘಾತವಾಗಿದೆ ಎನ್ನಲಾಗಿದೆ.
ADVERTISEMENT
ADVERTISEMENT