* ಯಾರೋ ಬಂದು ಸಹಾಯ ಮಾಡುತ್ತಾರೆ ಎಂದು ಕಾದು ನಿಲ್ಲುವುದು ಮೂರ್ಖತ್ವ
* ಏನಾದರೂ ಮಾಡಬೇಕೆಂದು ಸಂಕಲ್ಪಿಸಿದರೆ, ಅದಕ್ಕೆ ಕೂಡಲೇ ಪ್ರಯತ್ನ ಶುರು ಮಾಡಿ
* ಎದುರಿಗೆ ಇರುವವರು ಏನಂದುಕೊಳ್ಳುತ್ತಾರೋ ಎಂದು ಕೆಲಸ ಮಾಡುವುದನ್ನು ಬಿಡಿ.
* ನಿಮ್ಮ ಪಾಲಿನ ಕೆಲಸವನ್ನು ನೀವು ಅಚ್ಚುಕಟ್ಟಾಗಿ ಮಾಡಿ ಮುಗಿಸಿ
* ಹೇಳಬೇಕಿರುವುದನ್ನು ನೇರವಾಗಿ, ಕೂಡಲೇ ಹೇಳಿ.. ಹೇಳುವುದನ್ನು ಮುಂದೂಡಬೇಡಿ
* ಪ್ರತಿಯೊಂದಕ್ಕೂ ದೂರುತ್ತಾ ಕುಳಿತುಕೊಳ್ಳಬೇಡಿ. ಯಾವ ಪ್ರಯೋಜನವೂ ಇರಲ್ಲ
* ಎದುರಾದ ಸಮಸ್ಯೆಗಳಿಗೆ ಉತ್ತರ ಕಂಡುಕೊಂಡು ಮುಂದಕ್ಕೆ ಹೋಗಬೇಕು. ದೂರು ನೀಡುತ್ತಾ ಕುಳಿತರೆ ಕೆಲಸ ಆಗಲ್ಲ
* ಎಲ್ಲರನ್ನು ಸಂತೃಪ್ತಿ ಪಡಿಸಲು ಸಾಧ್ಯ ಇಲ್ಲ
* ಯಾರನ್ನು ಸಂತೃಪ್ತಿ ಮಾಡುವ ಕೆಲಸಕ್ಕೆ ಹೋಗದೇ ನೀವು ನಿಮ್ಮ ಕೆಲಸ ಮಾಡಿಕೊಂಡು ಹೋಗುವುದು ಉತ್ತಮ
* ಒಬ್ಬರ ಜೊತೆ ಹೋಲಿಕೆ ಸರಿಯಲ್ಲ.. ವ್ಯಕ್ತಿಗಳ ಪರಿಸ್ಥಿತಿ, ಶಕ್ತಿ ಸಾಮರ್ಥ್ಯ ಭಿನ್ನವಾಗಿ ಇರುತ್ತವೆ.
* ಒಬ್ಬರ ಜೊತೆ ಹೋಲಿಸಿ ಮಾತನಾಡುವುದರಿಂದ ಯಾವುದೇ ಪ್ರಯೋಜನ ಇಲ್ಲ.
* ನಿಮಗೆ ನಿಮ್ಮ ಶಕ್ತಿ ಸಾಮರ್ಥ್ಯದ ನಂಬಿಕೆ ಇರಬೇಕು
* ತಪ್ಪುಗಳಿಂದ ಪಾಠ ಕಲಿತುಕೊಳ್ಳಿ. ಮತ್ತೊಮ್ಮೆ ಆ ತಪ್ಪು ಪುನರಾವರ್ತಿಸಬೇಡಿ.
* ಮತ್ತೆ ಮತ್ತೆ ಅದೇ ತಪ್ಪುಗಳನ್ನು ಮಾಡುತ್ತಾ ಕುಳಿತರೇ ಸಮಯ ವ್ಯರ್ಥ. ನಿಮ್ಮ ಗುರಿಯೆಡೆಗೆ ತಲುಪುವುದು ಕಷ್ಟ ಆಗುತ್ತದೆ.
* ಪ್ರತಿಯೊಂದು ಇದು ಹೀಗೆ ಆಗಬೇಕು ಎಂದು ಕುಳಿತರೇ ಯಾವ ಕೆಲಸವೂ ಪೂರ್ತಿ ಆಗಲ್ಲ. ಕೆಲವೊಂದರಲ್ಲಿ ಹೊಂದಿಕೊಳ್ಳುವುದು ಅತ್ಯವಶ್ಯ. ಖಚಿತತೆ ಬಯಸುತ್ತಾ ಕುಳಿತರೇ ತೊಂದರೆ ಅನುಭವಿಸಬೇಕಾಗುತ್ತದೆ.
* ವೈಫಲ್ಯಗಳಿಗೆ ಹೆದರುತ್ತಾ ಕುಳಿತರೇ ಮುಂದೆ ಹೋಗಲು ಸಾಧ್ಯವಿಲ್ಲ. ವೈಫಲ್ಯಗಳನ್ನು ದಾಟಿದರೇನೇ ಗೆಲುವು ದಕ್ಕುತ್ತದೆ.
* ಇತರರನ್ನು ಅನುಸರಿಸಿ ಸಮಯ ವ್ಯರ್ಥ ಮಾಡಿಕೊಳ್ಳಬೇಡಿ. ನಿಮ್ಮ ಜೀವನ ನಿಮ್ಮ ಇಷ್ಟದಂತೆ ಇರಲಿ. ಪ್ರತಿ ಕ್ಷಣವನ್ನು ಸಂತೋಷದಿಂದ ಕಳೆಯಿರಿ.