ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ದಾರುಣ ಮತ್ತು ಅಮಾನವೀಯ ಘಟನೆಯೊಂದು ಬೆಳಕಿದೆ. ಅಧಿಕಾರದ ಮದದಲ್ಲಿ ಬಿಜೆಪಿ ಮುಖಂಡನೊಬ್ಬ ದಿನಗೂಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದ ಆದಿವಾಸಿ ಯುವಕನ ಮೇಲೆ ಮೂತ್ರ ವಿಸರ್ಜನೆ ಮಾಡಿ ಕ್ರೌರ್ಯ ಮೆರೆದಿದ್ದಾನೆ.
ಸಿಧಿ ಕ್ಷೇತ್ರದ ಬಿಜೆಪಿ ಶಾಸಕ ಗುರುದತ್ತ ಶರಣ್ ಶುಕ್ಲಾರ ಕಟ್ಟಾ ಬೆಂಬಲಿಗ, ಸ್ಥಳೀಯ ಬಿಜೆಪಿ ನಾಯಕ ಪ್ರವೇಶ್ ಶುಕ್ಲಾ ಈ ಕುಕೃತ್ಯ ಎಸಗಿದ್ದಾನೆ. ಇದು ಯಾವಾಗ ನಡೆದಿರುವುದು ಎನ್ನುವುದು ಖಚಿತವಾಗಿ ಗೊತ್ತಾಗಿಲ್ಲ.
ಇದಕ್ಕೆ ಸಂಬಂಧಿಸಿದ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಆಕ್ರೋಶದ ಕಟ್ಟೆ ಒಡೆದಿದೆ.
ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳೆಲ್ಲಾ ಈ ಅಮಾನವೀಯ ಘಟನೆಯನ್ನು ಕಟುವಾಗಿ ಟೀಕಿಸಿವೆ. ಈ ದಾರುಣ ಮಾಮ ಸರ್ಕಾರಕ್ಕೆ ಕಾಣಿಸುತ್ತಲವಾ..? ಇಂತಹ ವಿಕೃತ ಮನಸ್ಕನನ್ನು ಇನ್ನೂ ಏಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿದೆ. ನಿಮ್ಮದೇ ಪಕ್ಷದ ಮುಖಂಡನಾಗಿರುವ ಕಾರಣ ಬಂಧಿಸಲು ಮೀನಾಮೇಷನಾ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಇದು ಹೇಯ ಕೃತ್ಯ.. ಇಂತಹ ಘಟನೆಗಳಿಗೆ ನಾಗರಿಕ ಸಮಾಜದಲ್ಲಿ ಜಾಗ ಇಲ್ಲ.. ಮಧ್ಯಪ್ರದೇಶದಲ್ಲಿ ಆದಿವಾಸಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಕೊನೆ ಆಗಬೇಕು – ಕಮಲ್ನಾಥ್, ಮಾಜಿ ಮುಖ್ಯಮಂತ್ರಿ
ಈ ಬೆಳವಣಿಗೆಯಿಂದ ತೀವ್ರ ಮುಜುಗರಕ್ಕೊಳಗಾದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕೊನೆಗೂ ಟ್ವಿಟ್ಟರ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
ಈ ಅಮಾನವೀಯ ಕೃತ್ಯವೆಸಗಿದವನನ್ನು ಕೂಡಲೇ ಅರೆಸ್ಟ್ ಮಾಡಬೇಕು.. ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ
ಎಂದು ಮುಖ್ಯಮಂತ್ರಿ ಮಾಹಿತಿ ನೀಡಿದ್ದಾರೆ.
ADVERTISEMENT
ADVERTISEMENT