ರೇಷನ್ ಕಾರ್ಡ್ ಹೊಂದಿರುವವರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ. ರೇಷನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ಜೊತೆ ಲಿಂಕ್ ಮಾಡುವುದಕ್ಕೆ ಇರುವ ಗಡುವನ್ನು ವಿಸ್ತರಿಸಿ ಮಹತ್ವದ ನಿರ್ಣಯ ತೆಗೆದುಕೊಂಡಿದೆ.
ಅಂತ್ಯೋದಯ, ಬಿಪಿಎಲ್ ಕಾರ್ಡ್‌ಗಳನ್ನು ಆಧಾರ್ ಕಾರ್ಡ್ ಜೊತೆ ಅನುಸಂಧಾನ ಮಾಡುವುದು ಕಡ್ಡಾಯವಾಗಿದೆ.
ಪಡಿತರ ಚೀಟಿಯನ್ನು ಆಧಾರ್ ಜೊತೆ ಲಿಂಕ್ ಮಾಡುವುದಕ್ಕೆ ಇದ್ದ ಜೂನ್ 30ರ ಗಡುವನ್ನು ಮತ್ತೆ ವಿಸ್ತರಿಸಿದೆ.
ಕೇಂದ್ರ ಸರ್ಕಾರ ವನ್ ನೇಷನ್-ಒನ್ ನೇಷನ್ ವಿಧಾನವನ್ನು ಜಾರಿ ಮಾಡಿದ ನಂತರ ಈ ಅನುಸಂಧಾನಕ್ಕೆ ಒತ್ತು ನೀಡಿತ್ತು.
ಕಾರ್ಡ್ ದುರುಪಯೋಗ, ಅಕ್ರಮಗಳನ್ನು ತಡೆಯುವುದು ಇದರ ಪ್ರಮುಖ ಉದ್ದೇಶವಾಗಿದೆ.
ಸೈಬರ್ ಸೆಂಟರ್‌ಗೆ ಹೋಗಿ ರೇಷನ್ ಕಾರ್ಡ್‌ಗೆ ಆಧಾರ್ ಲಿಂಕ್ ಮಾಡಿಸಬಹುದು.. ಇಲ್ಲವೇ ಆನ್‌ಲೈನ್ ಮೂಲಕ ಲಿಂಕ್ ಮಾಡಬಹುದು.
ADVERTISEMENT
ADVERTISEMENT