ಉಜಿರೆ : ಶ್ರೀ ಕ್ಷೇತ್ರ ಧರ್ಮಸ್ಥಳದ ‘ರತ್ನಮಾನಸ’ ವಿದ್ಯಾರ್ಥಿ ನಿಲಯದಿಂದ ಬಡ ವಿದ್ಯಾರ್ಥಿಗಳಿಗೆ ಅರ್ಜಿ ಆಹ್ವಾನ

ಉಜಿರೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನಡೆಯುವ ‘ರತ್ನಮಾನಸ’ ಜೀವನ ಶಿಕ್ಷಣ ಪದ್ದತಿ ವಿದ್ಯಾರ್ಥಿ ನಿಯಲಕ್ಕೆ 8 ನೇ ತರಗತಿಗೆ ಸೇರಲಿಚ್ಚಿಸುವ ಬಡ, ಹಿಂದುಳಿದ ಹಾಗೂ ಕೃಷಿಕ ಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಿದ ಎಲ್ಲಾ ವಿದ್ಯಾರ್ಥಿಗಳು ಇಲ್ಲಿ ನಮ್ಮ ಆಯ್ಕೆ ಪರೀಕ್ಷೆಗೆ ಹಾಜರಾಗಿ ಮೂರು ದಿನ ರತ್ನಮಾನಸದಲ್ಲಿ ಉಳಿದು ಇಲ್ಲಿನ ಪರಿಸರ, ಶಿಸ್ತು ಹಾಗೂ ವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆದುಕೊಲ್ಳಬೇಕು. ಹೈಸ್ಕೂಲು ವಿದ್ಯಾಭ್ಯಾಸ ಜೊತೆಗೆ ವಿದ್ಯಾರ್ಥಿಗಳಿಗೆ ಜೀವಣ ಶಿಕ್ಷಣ ಕ್ರಮವನ್ನು ಅಳವಡಿಸಿಕೊಳ್ಳುವ ಅಂಗವಾಗಿ ಕೃಷಿ, ಹೈನುಗಾರಿಕೆ, ಸಮಾಜಸೇವೆ ಮುಂತಾದ ವೃತ್ತಿಪರ ಹಾಗೂ ಸ್ವ ಉದ್ಯೋಗ ತರಬೇತಿಯನ್ನು ನೀಡಲಾಗುವುದು.

ಇಲ್ಲಿನ ಜೀವನ ಶಿಕ್ಷಣ ಕ್ರಮದ ಮಾಹಿತಿಯನ್ನು ಪಡೆದ ಬಳಿಕ ವಿದ್ಯಾರ್ಥಿಗೆ ಒಪ್ಪಿಗೆಯಾದಲ್ಲಿ 8 ನೇ ತರಗತಿಯ ಕನ್ನಡ ಮಾಧ್ಯಮಕ್ಕೆ ಸೇರಲಿಚ್ಚಿಸುವ ಅರ್ಹ ವಿದ್ಯಾರ್ಥಿಗಳನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ.

ದಿನಾಂಕ 05/04/2022 ರಿಂದ ಅರ್ಜಿಗಳನ್ನು ನೀಡಲಾಗುತ್ತದೆ. ದಿನಾಂಕ 25/04/2022 ರ ವರೆಗೆ ಮಾತ್ರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ. ಈ ರತ್ನಮಾನಸ ವಿದ್ಯಾರ್ಥಿ ನಿಲಯದಲ್ಲಿ ಆಂಗ್ಲ ಮಾಧ್ಯಮ,9 ನೇ ತರಗತಿ, 10 ನೇತರಗತಿ ಹಾಗೂ ವಿದ್ಯಾರ್ಥಿನಿಯರ ದಾಖಲಾತಿಗೆ ಅವಕಾಶವಿರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಕುರಿತ ಇನ್ನಷ್ಟು ಹೆಚ್ಚಿನ ಮಾಹಿತಿಗಳಿಗಾಗಿ ಕಛೇರಿ ದೂರವಾಣಿ ಸಂಖ್ಯೆ 080023901791, ಮೊಬೈಲ್ ಸಂಖ್ಯೆ- 9480351201, 9449244425 ಹಾಗೂ 7892397525 ಸಂಖ್ಯೆಗಳಿಗೆ ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here