Shree Ram Mandir : ನೀಲಿ ಮಿಶ್ರಿತ ಶ್ವೇತ ಶಿಲೆಯಲ್ಲಿ ಶ್ರೀರಾಮ – ಕರ್ನಾಟಕದಿಂದ ಸ್ವರ್ಣ ಶಿಖರ?

Shree Ram Mandir

ಅಯೋಧ್ಯೆಯಲ್ಲಿ ರಾಮಮಂದಿರ (Shree Ram Mandir) ನಿರ್ಮಾಣ ಕಾರ್ಯ ಭರ್ಜರಿಯಾಗಿ ನಡೀತಿದೆ. ಶ್ರೀರಾಮನ ಗರ್ಭಗುಡಿಗೆ ಕರ್ನಾಟಕದಿಂದ ಸ್ವರ್ಣ ಶಿಖರ ನಿರ್ಮಿಸಿಕೊಡಲು ರಾಜ್ಯದ ಪರವಾಗಿ ಉಡುಪಿ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಮನವಿ ಮಾಡಿಕೊಂಡಿದ್ದಾರೆ.

ಶ್ರೀರಾಮನ ಪ್ರತಿಮೆ ಸಂಬಂಧ ಅಯೋಧ್ಯೆಯಲ್ಲಿ ಮಹಾಂತ ನೃತ್ಯ ಗೋಪಾಲ್ ದಾಸ್ ಜೀ ನೇತೃತ್ವದಲ್ಲಿ ರಾಮಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್ ಇಂದು​ ಮಹತ್ವದ ಸಭೆ ನಡೆಸಿದೆ. ಅಯೋಧ್ಯೆ ಮಂದಿರದಲ್ಲಿ ನೀಲಿ ಮಿಶ್ರಿತ ಶ್ವೇತ ಶಿಲೆಯಲ್ಲಿ ವಿಗ್ರಹ ನಿರ್ಮಿಸಲು ಸಮಿತಿ ನಿರ್ಣಯ ಕೈಗೊಂಡಿದೆ.

ಈ ಸಭೆಯಲ್ಲಿ ಟ್ರಸ್ಟಿನ ವಿಶ್ವಸ್ಥ ಉಡುಪಿ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಭಾಗಿ ಆಗಿದ್ದರು. ಶಿಲ್ಪ ಶಾಸ್ತ್ರೋಕ್ತ ರೀತಿಯಲ್ಲಿ ರಾಮನ ವಿಗ್ರಹ ಪ್ರತಿಷ್ಠಾಪಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ವಿಶ್ವಪ್ರಸನ್ನ ತೀರ್ಥ ಶ್ರೀಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ : Swaroopananda Swamiji : ಶ್ರೀರಾಮ ಮಂದಿರಕ್ಕಾಗಿ ಹೋರಾಡಿದ್ದ ಸ್ವಾಮೀಜಿ ಇನ್ನಿಲ್ಲ

ಶ್ರೀರಾಮ ಮಂದಿರ (Shree Ram Mandir) ನಿರ್ಮಾಣ ವೆಚ್ಚದಲ್ಲಿ ಹೆಚ್ಚಳವಾಗುವ ಸಾಧ್ಯತೆ ಕಂಡು ಬರುತ್ತಿದೆ. ಮಂದಿರ ನಿರ್ಮಾಣ ಮಾಡಲು ಈ ಮೊದಲು 400 ಕೋ. ವೆಚ್ಚದ ಅಂದಾಜು ಮಾಡಲಾಗಿತ್ತು. ಈಗಾಗಲೇ 300 ಕೋ. ರೂಪಾಯಿ ಖರ್ಚಾಗಿದೆ. ಈ ಹಿನ್ನೆಲೆಯಲ್ಲಿ, ಮಂದಿರ ನಿರ್ಮಾಣದ  ಹಣ 1300 ಕೋ.ರೂಗೆ ಏರಿಕೆಯಾಗಬಹುದು ಎಂದು ಸಮಿತಿ ಅಂದಾಜಿಸಿದೆ.

ಇನ್ನು. ಕರ್ನಾಟಕದಿಂದ ಶ್ರೀರಾಮಮಂದಿರದ ಸ್ವರ್ಣ ಶಿಖರ ನಿರ್ಮಿಸಿಕೊಡಲು ಅವಕಾಶ ಕೊಡಿ ಅಂತ ಶ್ರೀಗಳು ಸಭೆಯಲ್ಲಿ ಮನವಿ ಮಾಡಿದ್ದಾರೆ. ಈ ಮನವಿಗೆ ಸಭೆ ಒಪ್ಪಿಗೆ ನೀಡುವ ಸಾಧ್ಯತೆ ಇದೆ. ಸಭೆ ಒಪ್ಪಿಗೆ ನೀಡಿದಲ್ಲಿ ಕರ್ನಾಟಕದ ಹಂಪೆಯಿಂದ ಸ್ವರ್ಣ ಶಿಖರ ಯಾತ್ರೆ ಮಾಡಲು ಕರ್ನಾಟಕದ ಭಕ್ತಾದಿಗಳು ಪ್ಲಾನ್ ಮಾಡಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ಇದನ್ನೂ ಓದಿ : ರಾಮ ಮಂದಿರ ನಿರ್ಮಾಣ ಕಾಮಗಾರಿ – ಉಪಗ್ರಹ ಚಿತ್ರಗಳು

LEAVE A REPLY

Please enter your comment!
Please enter your name here