ಅಯೋಧ್ಯೆಯಲ್ಲಿ (Ayodya) ನಿರ್ಮಾಣ ಆಗುತ್ತಿರುವ ಭವ್ಯ ರಾಮಮಂದಿರದ (Ram Mandir) ನಿರ್ಮಾಣ ವೆಚ್ಚ ಎಷ್ಟು ಗೊತ್ತಾ..? ಅಂದಾಜು ಬರೋಬ್ಬರೀ 1,800 ಕೋಟಿ ರೂಪಾಯಿ.
1,800 ಕೋಟಿ ರೂಪಾಯಿ ಖರ್ಚಾಗಬಹುದು ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಂದಾಜಿಸಿದೆ. ಸುಪ್ರೀಂಕೋರ್ಟ್ನ (Supreme Court) ತನ್ನ ಐತಿಹಾಸಿಕ ತೀರ್ಪಿನಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಟ್ರಸ್ಟ್ ರಚಿಸುವಂತೆ ಸೂಚಿಸಿತ್ತು.
ಮುಂದಿನ ವರ್ಷದ ಅಂದರೆ 2023ರ ಡಿಸೆಂಬರ್ ವೇಳೆಗೆ ರಾಮಮಂದಿರ ನಿರ್ಮಾಣ ಪೂರ್ಣಗೊಳ್ಳಲಿದೆ. 2024ರ ಜನವರಿಯಲ್ಲಿ ಮಕರ ಸಂಕ್ರಾಂತಿಯಂದು ರಾಮಮಂದಿರಲ್ಲಿ ಶ್ರೀರಾಮ (Sri Ram) ಆಸೀನನಾಗಲಿದ್ದಾನೆ.
ಆರಂಭದಲ್ಲಿ ರಾಮಮಂದಿರ ನಿರ್ಮಾಣದ ಖರ್ಚು 1 ಸಾವಿರ ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿತ್ತು. ಆದರೆ ಈಗ 1,800 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಮೂಲಕ 800 ಕೋಟಿ ರೂಪಾಯಿ ಹೆಚ್ಚಳ ಆಗಿದೆ.
ಸದ್ಯದವರೆಗೂ ಮಂದಿರ ನಿರ್ಮಾಣಕ್ಕೆ 400 ಕೋಟಿ ರೂಪಾಯಿ ಖರ್ಚಾಗಿದೆ.
ಮಂದಿರ ನಿರ್ಮಾಣಕ್ಕೆ ಈಗಾಗಲೇ ಭಕ್ತರು ಟ್ರಸ್ಟ್ಗೆ 5,500 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. ನಗದು ಮತ್ತು ಆನ್ಲೈನ್ ಮೂಲಕ ಪ್ರತಿ ದಿನ ಲಕ್ಷಾಂತರ ಮಂದಿ ರಾಮಮಂದಿರಕ್ಕಾಗಿ ದೇಣಿಗೆ ನೀಡುತ್ತಿದ್ದಾರೆ. ಆದರೆ ವಿದೇಶಗಳಲ್ಲಿರುವ ಭಕ್ತರಿಂದ ದೇಣಿಗೆ ಸ್ವೀಕರಿಸಲು ಟ್ರಸ್ಟ್ಗೆ ಸದ್ಯಕ್ಕೆ ಸಾಧ್ಯವಾಗುತ್ತಿಲ್ಲ.
ರಾಮಮಂದಿರ ಆವರಣದಲ್ಲಿ ಋಷಿಗಳ ಮಂದಿರಗಳೂ ನಿರ್ಮಾಣ ಆಗಲಿವೆ. ಮಹರ್ಷಿ ವಾಲ್ಮೀಕಿ, ಮಹರ್ಷಿ ವಿಶ್ವಾಮಿತ್ರ, ಅನಸೂಯ, ನಿಷದರಾಜ, ಮಾತಾ ಶಬರಿ ಮತ್ತು ಜಟಾಯು ಪಕ್ಷಿಯ ಮಂದಿರ ನಿರ್ಮಾಣ ಆಗಲಿದೆ.
ರಾಮಮಂದಿರದಲ್ಲಿ 14 ದ್ವಾರಗಳು ನಿರ್ಮಾಣವಾಗಲಿವೆ. ಈ ದ್ವಾರಗಳ ಬಾಗಿಲಿಗೆ ಮಹಾರಾಷ್ಟ್ರದಿಂದ ಸಾಗುವಾನಿ ಮರವನ್ನು ಬಳಸಿಕೊಳ್ಳಲಾಗುತ್ತದೆ. ಆರಂಭದಲ್ಲಿ 13 ದ್ವಾರಗಳು ಇರಲಿವೆ. ರಾಮಲಲ್ಲಾನ ಮೂರ್ತಿ ಪ್ರತಿಷ್ಠಾಪಿಸಲಾಗುವ ರಾಮಲಲ್ಲಾ (Ramlalla) ದೊಡ್ಡ ದ್ವಾರದ ನಿರ್ಮಾಣವಾಗಲಿದೆ.
ADVERTISEMENT
ADVERTISEMENT