Sidhu Moosewala Murder Case : 3 ರಾಜ್ಯದ 60 ಕಡೆ NIA ದಾಳಿ

Sidhu Moosewala Murder Case

ಪಂಜಾಬಿ ಗಾಯಕ ಸಿಧು ಮೂಸೆವಾಲಾ ಕೊಲೆ ಪ್ರಕರಣಕ್ಕೆ (Sidhu Moosewala Murder Case) ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ರಾಷ್ಟ್ರೀಯ ತನಿಖಾ ದಳ (NIA) ದೇಶದ 3 ರಾಜ್ಯಗಳಲ್ಲಿ ಗ್ಯಾಂಗ್ ಸ್ಟರ್ ಗಳಿಗೆ ಸಂಬಂಧಿಸಿದ 60 ಜಾಗಗಳಲ್ಲಿ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದೆ.

ಪ್ರಕರಣದ ಪ್ರಮುಖ ಆರೋಪಿಗಳಾದ ಲಾರೆನ್ಸ್​ ಬಿಷ್ಣೋಯ್, ಗೋಲ್ಡೀ ಬ್ರಾರ್ ಅವರಿಗೆ ಸೇರಿದ ಹಲವು ಸ್ಥಳಗಳ ಮೇಲೆ ಸೋಮವಾರ ಮುಂಜಾನೆ ದಾಳಿ ನಡೆಸಿದ್ದು, ಸಿಧು ಮೂಸೆ ವಾಲಾ ಕೊಲೆಯಲ್ಲಿ (Sidhu Moosewala Murder Case) ಭೂಗತ ಲೋಕದ ಈ ದುಷ್ಕರ್ಮಿಗಳು ವಹಿಸಿದ್ದ ಪಾತ್ರದ ಬಗ್ಗೆ ಎನ್​ಐಎ ಮಾಹಿತಿ ಕಲೆ ಹಾಕುತ್ತಿದೆ. ದೆಹಲಿ, ರಾಷ್ಟ್ರ ರಾಜಧಾನಿ ಪ್ರದೇಶ (ಎನ್​ಸಿಆರ್) ಮತ್ತು ಹರಿಯಾಣದ ಯಮುನಾ ನಗರ, ಮಜಿತಾ ರಸ್ತೆ, ಮುಕ್ತ್‌ಸರ್, ಗುರುದಾಸ್‌ಪುರ ಮತ್ತು ಗುರುಗ್ರಾಮ್‌ ಸೇರಿದಂತೆ ಒಟ್ಟು 60 ವಿವಿಧ ಸ್ಥಳಗಳಲ್ಲಿ ಎನ್​ಐಎ ಸಿಬ್ಬಂದಿ ಶೋಧ ಆರಂಭಿಸಿದ್ದಾರೆ.

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಪಂಜಾಬ್‌ನಲ್ಲಿ ಪಾಕಿಸ್ತಾನದಿಂದ ಮಾದಕವಸ್ತು ಕಳ್ಳಸಾಗಣೆಯಲ್ಲಿ ತೊಡಗಿರುವ ಆರೋಪದ ಪ್ರಕರಣವನ್ನು ತನಿಖೆ ನಡೆಸುತ್ತಿದೆ. ಈ ರೀತಿ ಕಳ್ಳಸಾಗಣೆಯಲ್ಲಿ ಬಂದ ಹಣವನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ನೀಡಲಾಗಿದೆ ಎಂದು ಎನ್​ಐಎ ಆರೋಪಿಸಲಾಗಿದೆ. ಇದನ್ನೂ ಓದಿ : ಸಿಧು ಮೂಸೆವಾಲಾ ಹತ್ಯೆ ಪ್ರಕರಣ : ನಾಲ್ವರು ಆರೋಪಿಗಳ ಎನ್​ಕೌಂಟರ್

ಪಂಜಾಬ್ ಚುನಾವಣೆಗೂ ಮುನ್ನ ಕಾಂಗ್ರೆಸ್ ಸೇರಿದ್ದ ಜನಪ್ರಿಯ ಪಂಜಾಬಿ ಗಾಯಕ ಮತ್ತು ರಾಪರ್ ಸಿಧು ಮೂಸೆ ವಾಲಾ (Sidhu Moose Wala) ಅವರನ್ನು ಕಳೆದ ಮೇ ತಿಂಗಳಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಸಿಧು ಮೂಸೆ ವಾಲಾ ಸೇರಿದಂತೆ 424 ಜನರ ಭದ್ರತೆಯನ್ನು ಪಂಜಾಬ್ ಸರ್ಕಾರ ವಾಪಸ್ ಪಡೆದ ಬೆನ್ನಲ್ಲೇ ಸಿಧು ಮೂಸೆವಾಲಾ ಅವರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಮೂಸೆ ವಾಲಾ ಮೇ 29 ರಂದು ತನ್ನ ಸ್ನೇಹಿತ ಮತ್ತು ಸೋದರ ಸಂಬಂಧಿಯೊಂದಿಗೆ ಜವಾಹರ್ ಕೆ ಗ್ರಾಮಕ್ಕೆ ಜೀಪ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಮಾನ್ಸಾದಲ್ಲಿ ಹತ್ಯೆಯಾಗಿದ್ದರು.

ಮೂಸೆವಾಲಾರ ಮೃತ ದೇಹದಲ್ಲಿ 25 ಗುಂಡುಗಳು ನುಗ್ಗಿದ್ದ ಗಾಯದ ಗುರುತುಗಳಿದ್ದವು. ಈ ಘಟನೆ ಪಂಜಾಬ್​ನಲ್ಲಿ ವ್ಯಾಪಕ ಆಕ್ರೋಶ ಹುಟ್ಟುಹಾಕಿತ್ತು. ಮೂಸೆವಾಲಾ ಹತ್ಯೆ ಪ್ರಕರಣವನ್ನು ಪಂಜಾಬ್ ಪೊಲೀಸರು ತನಿಖೆ ನಡೆಸುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ 23 ಜನರನ್ನು ಬಂಧಿಸಿದ್ದಾರೆ. ಇದನ್ನೂ ಓದಿ : ಪಂಜಾಬ್ : ಸಿಧು ಮೂಸೆವಾಲಾ ಹತ್ಯೆ ಪ್ರಕರಣ – ಶಂಕಿತ ಆರೋಪಿ ಎನ್​ಕೌಟರ್​​

LEAVE A REPLY

Please enter your comment!
Please enter your name here