ಟಾಲಿವುಡ್ ನಟ ಶರ್ವಾನಂದ್ ಅವರ ಮದುವೆ ಜೂನ್ ಮೂರರಂದು ಜೈಪುರ ಪ್ಯಾಲೇಸ್ನಲ್ಲಿ ನಿಗದಿಯಾಗಿದೆ. ಇದಕ್ಕೆ ಎಲ್ಲಾ ಸಿದ್ಧತೆಗಳು ನಡೆದಿವೆ. ಆದರೆ, ಇಂದು ಬೆಳಗಿನ ಜಾವ ಶರ್ವಾನಂದ್ ಪಯಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ
ಹೈದರಾಬಾದ್ನ ಫಿಲಂನಗರ್ ಜಂಕ್ಷನ್ ಬಳಿ ಶರ್ವಾನಂದ್ ತೆರಳ್ತಿದ್ದ ರೇಂಜ್ ರೋವರ್ ಕಾರು ಅಪಘಾತಕ್ಕಿಡಾಗಿದೆ. ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಅಪಘಾತದಲ್ಲಿ ಶರ್ವಾನಂದ್ ಅಲ್ಪ ಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದಾರೆ.
ಸದ್ಯ ಶರ್ವಾನಂದ್ ಅವರನ್ನು ಹೈದರಾಬಾದ್ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶರ್ವಾನಂದ್ಗೆ ಯಾವುದೇ ಅಪಾಯವಿಲ್ಲ. ಅಭಿಮಾನಿಗಳು ಆತಂಕಗೊಳ್ಳುವುದು ಬೇಡ ಎಂದು ಆಸ್ಪತ್ರೆ ಮತ್ತು ಕುಟುಂಬ ಮೂಲಗಳು ತಿಳಿಸಿವೆ.
ಅಪಘಾತ ಹೇಗೆ ಆಯಿತು ಎಂಬ ಬಗ್ಗೆ ಪೂರ್ಣ ವಿವರಗಳು ತಿಳಿಯಬೇಕಿದೆ.
ADVERTISEMENT
ADVERTISEMENT