ADVERTISEMENT
ದಲಿತ ಮಹಿಳಾ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಆಹ್ವಾನ ನೀಡದೇ ಪ್ರಧಾನಮಂತ್ರಿ ನರೇಂದ್ರ ಮೋದಿ ಇವತ್ತು ಉದ್ಘಾಟಿಸಿದ ಹೊಸ ಸಂಸತ್ತಿನ ಕಟ್ಟಡದ ವಿನ್ಯಾಸವನ್ನು ಆರ್ಜೆಡಿ ಶವಪೆಟ್ಟಿಗೆಗೆ ಹೋಲಿಸಿದೆ.
ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ತನ್ನ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದೆ.
ಒಂದು ಭಾಗದಲ್ಲಿ ಶವಪೆಟ್ಟಿಗೆಯ ಚಿತ್ರ ಮತ್ತೊಂದು ಭಾಗದಲ್ಲಿ ಹೊಸ ಸಂಸತ್ತಿನ ಕಟ್ಟಡ ಚಿತ್ರವನ್ನು ಹಂಚಿಕೊಂಡು ಆರ್ಜೆಡಿ ಪ್ರಧಾನಿ ಮೋದಿಯವರಿಗೆ ಪರೋಕ್ಷವಾಗಿ ಕುಟುಕಿದೆ.
ಸಂಸತ್ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ ಬಹಿಷ್ಕರಿಸಿದ 19 ಪಕ್ಷಗಳ ಪೈಕಿ ಆರ್ಜೆಡಿ ಕೂಡಾ ಒಳಗೊಂಡಿದೆ.
2014ರಲ್ಲಿ ನರೇಂದ್ರ ಮೋದಿ ಪ್ರಧಾನಿ ಆದ ಬಳಿಕ ದೇಶದಲ್ಲಿ ಪ್ರಜಾಪ್ರಭುತ್ವವನ್ನು ಹತ್ತಿಕ್ಕಿ ದಮನಕಾರಿ ಸರ್ವಾಧಿಕಾರಿ ನೀತಿಯನ್ನು ಅನುಸರಿಸಲಾಗುತ್ತಿದೆ ಎಂದು ವಿಪಕ್ಷಗಳು ನಿರಂತರವಾಗಿ ಆರೋಪಿಸುತ್ತಿವೆ.
ADVERTISEMENT