ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ತಾಲೂಕಿನ, ಮೂಡಬಿದ್ರೆ ತಾಲೂಕಿನ ಮೂಡುಮಾರ್ನಾಡಿನಲ್ಲಿರುವ ಹಿರಿಯ ಪ್ರಾಥಮಿಕ ಶಾಲೆ ಪ್ರಾರಂಭವಾದುದುದು 1920 ರಲ್ಲಿ. ನೂರು ವರ್ಷಗಳ ಇತಿಹಾಸವಿರುವ ಶಾಲೆ ತನ್ನದೇ ಆದ ಗೌರವವನ್ನು ಇಂದಿಗೂ ಉಳಿಸಿಕೊಂಡು ಬಂದಿದೆ.
ಇಲ್ಲಿ ಪ್ರಸ್ತುತ 140 ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಎಲ್ ಕೆ ಜಿ ಯಿಂದ ಆಂಗ್ಲ ಮಾಧ್ಯಮವು ಪ್ರಾರಂಭವಾಗಿದೆ. ಶಿಕ್ಷಕರು ತಮ್ಮ ನಿಷ್ಕಲ್ಮಶ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಅತಿಥಿ ಶಿಕ್ಷಕರು, ಅಕ್ಷರ ದಾಸೋಹದ ಸಿಬ್ಬಂದಿಗಳೂ ಇದ್ದಾರೆ. ಸರ್ಕಾರದಿಂದ ಬರುವ ಎಲ್ಲಾ ಸವಲತ್ತುಗಳನ್ನು ಶಿಕ್ಷಕರು ಹಾಗೂ ಶಾಲಾಭಿವೃದ್ಧಿ ಸಮಿತಿಯವರು ಮಕ್ಕಳಿಗೆ ಸೂಕ್ತ ರೀತಿಯಲ್ಲಿ ತಲುಪುವಂತೆ ಮಾಡುತ್ತಿದ್ದಾರೆ. ಮಕ್ಕಳು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ, ಆಟೋಟಗಳಲ್ಲಿ ತಮ್ಮನ್ನ ತಾವು ತೊಡಗಿಸಿಕೊಳ್ಳುವಂತೆ ಶಿಕ್ಷಕರು ಗಮನಾರ್ಹ ಪ್ರಯತ್ನದಲ್ಲಿದ್ದಾರೆ. ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ವ್ಯಾಸಂಗ ನಡೆಸುತ್ತಿದ್ದಾರೆ.
ಇದೇ ಡಿಸೆಂಬರ್ 16ರಂದು ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ “ಪ್ರತಿಭಾ ಪುರಸ್ಕಾರ” ನಡೆಸಲು ತೀರ್ಮಾನಿಸಲಾಗಿದೆ. ಹಾಗಾಗಿ ಶಾಲಾ ಹಳೆ ವಿದ್ಯಾರ್ಥಿಗಳು, ಊರವರು, ವಿದ್ಯಾಭಿಮಾನಿಗಳು ಎಲ್ಲರೂ ಶಾಲಾ ಈ ಕಾರ್ಯಕ್ರಮಕ್ಕೆ ತನುಮನ ಧನದಿಂದ ಸಹಾಯ ಮಾಡಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇವೆ. ನಿಮ್ಮೆಲ್ಲರ ಸಹಾಯ ಸಹಕಾರ ನಮೆ ಅತ್ಯಗತ್ಯ. ಶಾಲೆಯ ಈ ಕಾರ್ಯಕ್ರಮಕ್ಕೆ ನಾವೆಲ್ಲರೂ ಕೈ ಜೋಡಿಸೋಣ.
ಧನ್ಯವಾದಗಳೊಂದಿಗೆ,
ಅಧ್ಯಕ್ಷರು ಹಾಗೂ ಸರ್ವಸದಸ್ಯರು
ಶಾಲಾಭಿವೃದ್ಧಿ ಸಮಿತಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೂಡುಮಾರ್ನಾಡು
ಶಾಲಾ ಬ್ಯಾಂಕ್ ವಿವರ:
ಯೂನಿಯನ್ ಬ್ಯಾಂಕ್
A/c No.:160122010001026
IFSC CODE : UBIN091603
Branch: Moodumarnadu