ನಟ ಮತ್ತು ರಾಜ್ಯಸಭಾ ಸಂಸದ ಜಗ್ಗೇಶ್ ಅವರು ನಟಿ ಲೀಲಾವತಿ ಅವರ ಅಂತಿಮ ದರ್ಶನವನ್ನು ಪಡೆದರು. ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಅಂತಿಮ ದರ್ಶನ ಪಡೆದ ಜಗ್ಗೇಶ್ ಅವರು ಲೀಲಾವತಿ ಅವರು ತಾವು ನಟನಾಗಬೇಕು ಎಂದು ಹರಸಿದ್ದರ ಬಗ್ಗೆ ಬರೆದುಕೊಂಡಿದ್ದಾರೆ.
ಮಾತೃಶ್ರೀ ಲೀಲಾವತಿ ಅಮ್ಮನವರ ಅಂತಿಮ ದರ್ಶನ ಪಡೆದೆ. ಅವರ ಮಗ ವಿನೋದರಾಜ್ ಚಿತ್ರದಲ್ಲಿ ಖಳನಟ ಪಾತ್ರಮಾಡಿದಾಗ ಜಗ್ಗೇಶ ನೀನು ಬೇಗ ನಾಯಕ ನಟನಾಗು ಎಂದು ಹರಸಿದ ಅವರ ಅಮೃತವಾಕ್ಯ ನೆನೆಪಾಯಿತು. ನಮ್ಮ ಹಿರಿಯರು ನಮ್ಮ ಆಸ್ತಿ. ಓಂಶಾಂತಿ
ಅನೇಕರು ಇವರಲ್ಲಿ ತಮ್ಮ ತಾಯಿಯ ಕಂಡರು ಅಂತೆಯೇ ನಾನು ಕೂಡ. ಇವರೊಟ್ಟಿಗೆ ನಟಿಸುವ ಯೋಗ ನನಗಿಲ್ಲಾ ಆದರೆ ವೈಯುಕ್ತಿಕವಾಗಿ ಇವರೊಟ್ಟಿಗೆ ಆತ್ಮೀಯತೆ ನನಗಿತ್ತು ಅದು1988 ಇವರ ಮಗನೊಂದಿಗೆ ಕೃಷ್ಣ ನೀ ಕುಣಿದಾಗ ಚಿತ್ರದ ನಟನೆಯ ನಂತರ. ಮಗನನ್ನು ಎಷ್ಟು ಪ್ರೀತಿಸುತ್ತಿದ್ದರು ಎಂದರೆ ಅದು ವರ್ಣನೆಗೆ ನಿಲುಕದ್ದು ಇಂದು ಕಲಾದೇವಿ ಶಾರದೆಯೊಂದಿಗೆ ಲೀನ
ಎಂದು ನಟ ಜಗ್ಗೇಶ್ ಬರೆದುಕೊಂಡಿದ್ದಾರೆ.