ಈರುಳ್ಳಿ ರಫ್ತಿನ ಮೇಲಿನ ನಿಷೇಧವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಮತ್ತೆ ವಿಸ್ತರಿಸಿದೆ. ಮಾರ್ಚ್ ೩೧, ೨೦೨೪ರವರೆಗೆ ಈರುಳ್ಳಿ ರಫ್ತಿನ ಮೇಲಿನ ನಿಷೇಧವನ್ನು ವಿಸ್ತರಿಸಿದೆ.
ದೇಶದ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ನಿಯಂತ್ರಣಕ್ಕಾಗಿ ಮೋದಿ ಸರ್ಕಾರ ತನ್ನ ನಿಷೇಧ ನಿರ್ಧಾರವನ್ನು ವಿಸ್ತರಿಸಿದೆ.
ಆಗಸ್ಟ್ ೧೯ರಂದು ಕೇಂದ್ರ ಸರ್ಕಾರ ಈರುಳ್ಳಿ ರಫ್ತಿನ ಮೇಲೆ ಪ್ರತಿ ಮೆಟ್ರಿಕ್ ಟನ್‌ಗೆ 800 ಡಾಲರ್ ರಫ್ತು ಸುಂಕವನ್ನು ವಿಧಿಸಿತ್ತು, ಈ ಸುಂಕವನ್ನು ಡಿಸೆಂಬರ್ ೩೧ರವರೆಗೆ ವಿಸ್ತರಿಸಿತ್ತು.
ಕೇವಲ ಕೇಂದ್ರ ಸರ್ಕಾರ ಅನುಮತಿ ನೀಡಿದರಷ್ಟೇ ವಿದೇಶಗಳಿಗೆ ಈರುಳ್ಳಿ ರಫ್ತಿಗೆ ಅವಕಾಶ ಇದೆ ಎಂದು ಕೇಂದ್ರ ಸರ್ಕಾರ ತಾನು ಹೊರಡಿಸಿರುವ ಹೊಸ ಆದೇಶದಲ್ಲಿ ತಿಳಿಸಿದೆ.
ಆದರೆ ಋಫ್ತು ಆದೇಶ ವಿಸ್ತರಣೆಯಿಂದ ಈರುಳ್ಳಿ ಬೆಳೆಗಾರರು ಆಕ್ರೋಶಗೊಂಡಿದ್ದಾರೆ. ದೇಶೀಯ ಮಾರುಕಟ್ಟೆಯಲ್ಲಿ ಬೆಲೆ ಇಳಿದಿರುವ ಹೊತ್ತಲ್ಲಿ ರಫ್ತು ನಿಷೇಧ ಮುಂದುವರಿಸಿದ್ದು ಸರಿಯಲ್ಲ ಎಂದಿದ್ದಾರೆ.