ವೇಶ್ಯಾವಾಟಿಕೆ ದಂಧೆ ನಡೆಸ್ತಿದ್ದ ಮತ್ತು ಬಿಜೆಪಿ ಸರ್ಕಾರದಲ್ಲೇ ಪ್ರಭಾವ ಹೊಂದಿದ್ದ ಸ್ಯಾಂಟ್ರೋ ರವಿ ಅಲಿಯಾಸ್ ಮಂಜುನಾಥ್ನನ್ನು ಗುಜರಾತ್ನಲ್ಲಿ ಕರ್ನಾಟಕದ ಪೊಲೀಸರು ಬಂಧಿಸಿದ್ದಾರೆ.
ಆದರೆ ಬಿಜೆಪಿ ಆಡಳಿತ ಇರುವ ಗುಜರಾತ್ನಲ್ಲೇ ಸ್ಯಾಂಟ್ರೋ ರವಿ ಬಂಧನವಾಗಿದ್ದು ಈಗ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ.
ಗೃಹ ಸಚಿವ ಅರಗ ಜ್ಞಾನೇಂದ್ರ ಗುಜರಾತ್ ನಗರಿ ಅಹಮದಾಬಾದ್ಗೆ ಹೋದ ದಿನವೇ ಗುಜರಾತ್ನಲ್ಲೇ ವೇಶ್ಯಾವಾಟಿಕೆ ದಂಧೆಯ ಆರೋಪಿ ಸ್ಯಾಂಟ್ರೋ ರವಿ ಬಂಧನವಾಗಿದ್ದು ವಿಶೇಷ. ಇದನ್ನೇ ಮುಂದಿಟ್ಟುಕೊಂಡು ವಿರೋಧ ಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್ ವಾಗ್ದಾಳಿ ನಡೆಸಿದೆ.
ನಿನ್ನೆ ಗೃಹಸಚಿವ @JnanendraAraga ಅವರು ಗುಜರಾತಿನ ಅಹಮದಾಬಾದ್ಗೆ ತೆರಳಿದ್ದರು.ಇಂದು ಅದೇ ಗುಜರಾತಿನ ಅಹಮದಾಬಾದ್ನಲ್ಲಿ ಸ್ಯಾಂಟ್ರೋ ರವಿಯ ಬಂಧನ. ಇದು ಖಂಡಿತಾ ಕಾಕತಾಳೀಯವಲ್ಲ.
ಸ್ಯಾಂಟ್ರೋ ರವಿಯ ಆಪ್ತರಾದ ಗೃಹ ಸಚಿವ @JnanendraAraga ಅವರು ನಿನ್ನೆ ಗುಜರಾತಿಗೆ ಹೋಗಿರುತ್ತಾರೆ, ಸ್ಯಾಂಟ್ರೋ ರವಿಯೂ ಗುಜರಾತಿಗೆ ಹೋಗಿರುತ್ತಾನೆ. ಬಂಧನವೂ ಗುಜರಾತಿನಲ್ಲಿ.
ರವಿ ಗೃಹಸಚಿವರೊಂದಿಗೆ ಅಲ್ಲಿಗೆ ಹೋಗಿದ್ದನೇ? ಅಲ್ಲಿ ಅವರಿಬ್ಬರ ನಡುವೆ ಒಪ್ಪಂದ ನಡೆದಿರಬಹುದೇ? ತಮ್ಮ ವಿರುದ್ದದ ಸಾಕ್ಷ್ಯ ನಾಶಕ್ಕಾಗಿ ಗುಜರಾತಿಗೆ ಹೋಗಿದ್ದರೆ?
@JnanendraAraga ಅವರೇ,
◆ಗುಜರಾತಿನಲ್ಲಿ ಸ್ಯಾಂಟ್ರೋ ರವಿ ನಿಮ್ಮ ಮದ್ಯೆ ನಡೆದ ಡೀಲಿಂಗ್ ಏನು?
◆ವರ್ಗಾವಣೆ ದಂಧೆಯ ಸಾಕ್ಷ್ಯಗಳನ್ನು ಮುಚ್ಚಿಡಲು ಒಪ್ಪಂದ ಮಾಡಿಕೊಂಡಿರಾ?
◆ಆತನ ಬಳಿ ಇದ್ದ ಹಲವು ಸಚಿವರ ಸಿಡಿಗಳನ್ನ ವಶಪಡಿಸಿಕೊಳ್ಳಲು ಹೋಗಿದ್ರಾ?
◆ಅಥವಾ ಹೈಕಮಾಂಡ್ಗೆ ಭೇಟಿ ಮಾಡಿಸಿ ಆತನಿಗೆ ಉನ್ನತ ಹುದ್ದೆ ಕೊಡಿಸಲು ಹೋಗಿದ್ರಾ?
ಎಂದು ಕಾಂಗ್ರೆಸ್ ಸರಣಿ ಟ್ವೀಟ್ಗಳನ್ನು ಮಾಡಿದೆ.
ಸ್ಯಾಂಟ್ರೋ ರವಿ ಜೊತೆಗೆ ಗೃಹ ಸಚಿವರೂ ಹೋಗಿರಬೇಕು:
ಸ್ಯಾಂಟ್ರೋ ರವಿ ಜೊತೆಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಕೂಡಾ ಗುಜರಾತ್ಗೆ ಹೋಗಿರಬಹುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಸ್ಫೋಟಕ ಆರೋಪ ಮಾಡಿದ್ದಾರೆ.
ಆತ ಗುಜರಾತ್ಗೆ ಹೋಗಿದ್ದಾನೆ ಎಂದರೆ ಆತನನ್ನು ಹೊರದೇಶಕ್ಕೆ ಕಳುಹಿಸಿಕೊಡುವ ಬಗ್ಗೆ ಸಂಚು ನಡೆದಿರಬಹುದು. ಆತನ ರಕ್ಷಣೆಗಾಗಿಯೇ ಈ ಬಂಧನ ಆಗಿರಬಹುದು
ಎಂದು ಹೆಚ್ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.