ಆಪ್ ಆಧಾರಿತ ವಾಹನ ಸೇವೆ ನೀಡುವ ಮತ್ತು ಎಲೆಕ್ಟ್ರಿಕ್ ವಾಹನಗಳ ಉತ್ಪಾದಕ ಕಂಪನಿ ಓಲಾ 200 ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದೆ.
ಓಲಾ ಕ್ಯಾಬ್, ಓಲಾ ಎಲೆಕ್ಟ್ರಿಕ್ ಮತ್ತು ಓಲಾ ಫೈನಾನ್ಶಿಯಲ್ ಸರ್ವಿಸ್ನಲ್ಲಿರುವ ಉದ್ಯೋಗಿಗಳನ್ನು ತೆಗೆದು ಹಾಕಲಾಗಿದೆ.
200 ಮಂದಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವ ಬಗ್ಗೆ ಸೆಪ್ಟೆಂಬರ್ನಲ್ಲಿ ಓಲಾ ಘೋಷಣೆ ಮಾಡಿತ್ತು.
ಜೊತೆಗೆ ಕಳೆದ ವರ್ಷ 1 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವ ಯೋಚನೆ ಇದೆ ಕಂಪನಿ ಹೇಳಿತ್ತು. ನೌಕರರಿಗೆ ಸ್ವಯಂಪ್ರೇರಿತವಾಗಿ ಕೆಲಸ ಬಿಡುವಂತೆ ಸೂಚಿಸಿತ್ತು.
ADVERTISEMENT
ADVERTISEMENT