ADVERTISEMENT
ಕರ್ನಾಟಕದಲ್ಲಿ ಧರ್ಮ ರಾಜಕಾರಣಕ್ಕೆ ಕಾರಣವಾಗಿದ್ದ ಹಿಜಾಬ್ ವಿವಾದದ ಬಗ್ಗೆ ಸುಪ್ರೀಂಕೋರ್ಟ್ನಲ್ಲಿ ಹಿಜಾಬ್ ವಿರುದ್ಧ ವಾದಿಸುವ ಸಲುವಾಗಿ ಕರ್ನಾಟಕದಲ್ಲಿರುವ ಬಿಜೆಪಿ ಸರ್ಕಾರ 80 ಲಕ್ಷ ರೂಪಾಯಿ ಖರ್ಚು ಮಾಡಿತ್ತು.
ಸುಪ್ರೀಂಕೋರ್ಟ್ನಲ್ಲಿ ಹಿಜಾಬ್ ವಿವಾದದ ಸಂಬಂಧ ವಾದಿಸುವ ಸಲುವಾಗಿ ಸಾಲಿಸಿಟರ್ ಜನರಲ್ ತುಪಾರ್ ಮೆಹ್ತಾ ಅವರಿಗೆ ಒಂದು ದಿನದ ಹಾಜರಾತಿಗೆ 4 ಲಕ್ಷದ 40 ಸಾವಿರ ರೂಪಾಯಿಯಂತೆ 9 ದಿನದ ಹಾಜರಾತಿಗೆ 39 ಲಕ್ಷದ 60 ಸಾವಿರ ರೂಪಾಯಿ ನೀಡಿತ್ತು.
ಸುಪ್ರೀಂಕೋರ್ಟ್ನಲ್ಲಿ ಹಿಜಾಬ್ ವಿವಾದದ ಸಂಬಂಧ ವಾದಿಸುವ ಸಲುವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಎಂ ನಟರಾಜ್ ಅವರಿಗೆ 11 ದಿನದ ಹಾಜರಾತಿಗೆ 4 ಲಕ್ಷದ 40 ಸಾವಿರ ರೂಪಾಯಿಯಂತೆ 48 ಲಕ್ಷದ 40 ಸಾವಿರ ರೂಪಾಯಿ ಶುಲ್ಕ ಪಾವತಿಸಿದೆ.
ADVERTISEMENT