ಆರ್ ಆರ್​ ಆರ್​ ವಿಲನ್ ಸ್ಕಾಟ್ ದೊರೆ ಇನ್ನಿಲ್ಲ

ಆರ್ ಆರ್​ ಆರ್​ ವಿಲನ್ ಇನ್ನಿಲ್ಲ.. ಹೌದು, ಎಸ್​ಎಸ್​ ರಾಜಮೌಳಿ ನಿರ್ದೇಶನದ ಬ್ಲಾಕ್ ಬಸ್ಟರ್ ಮೂವಿ ಆರ್ ಆರ್​ ಆರ್ ಸಿನಿಮಾದಲ್ಲಿ ಸ್ಕಾಟ್ ದೊರೆಯ ನೆಗೆಟೀವ್ ರೋಲ್ ಮಾಡಿದ್ದ ಹಾಲಿವುಡ್ ನಟ ರೇ ಸ್ಟಿವನ್ಸನ್ ಹಠಾತ್ ಮರಣ ಹೊಂದಿದ್ದಾರೆ.

ಇಟಲಿಯಲ್ಲಿ ತಮ್ಮ ಹೊಸ ಚಿತ್ರ ಕ್ಯಾಸಿನೋ ಶೂಟಿಂಗ್​ನಲ್ಲಿ ಪಾಲ್ಗೊಂಡಿದ್ದ 58 ವರ್ಷದ ರೇ ಸ್ಟಿವನ್ಸನ್ ಭಾನುವಾರವೇ ಮೃತಪಟ್ಟಿದ್ದಾರೆ ಎನ್ನುವುದು ತಿಳಿದುಬಂದಿದೆ. ಆದರೆ, ರೇ ಸ್ಟಿವನ್ಸನ್ ಸಾವಿಗೆ ನಿಖರ ಕಾರಣಗಳು ತಿಳಿದುಬಂದಿಲ್ಲ.

ರೇ ಸ್ಟಿವನ್ಸನ್ ಅಕಾಲಿಕ ಸಾವಿನಿಂದ ಆರ್​ಆರ್​ಆರ್​ ಚಿತ್ರತಂಡ ಶಾಕ್ ಆಗಿದೆ. ರೇ ಸ್ಟಿವನ್ಸನ್ ನಿಧನಕ್ಕೆ ಚಿತ್ರತಂಡ ಕಂಬನಿ ಮಿಡಿದಿದೆ. ಸರ್ ಸ್ಕಾಟ್ ನೀವೆಂದು ನಮ್ಮ ಮನದಲ್ಲಿರುತ್ತೀರಿ ಎಂದು ಟ್ವೀಟಿಸಿದೆ.

ಐರಿಶ್​ ನಟರಾದ ರೇ ಸ್ಟಿವನ್ಸನ್ 1964ರ ಮೇ 25ರಂದು ಲಿಸ್​ಬರ್ನ್ ಎಂಬಲ್ಲಿ ಜನಿಸಿದ್ದರು. ದಿ ಥಿಯೆರಿ ಫೈಟ್​ನಿಂದ ಮೊದಲ್ಗೊಂಡು, ಕಿಂಗ್ ಅರ್ಥರ್​, ಪಿಕ್ ಪ್ರಾಕ್ಟೀಸ್​ ಸೇರಿ ಹಲವು ಹಾಲಿವುಡ್ ಚಿತ್ರಗಳಲ್ಲಿ ನಟಿಸಿದ್ದರು.