ಯು ಟಿ ಖಾದರ್​ ವಿಧಾನಸಭೆ ಸ್ಪೀಕರ್​

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಕ್ಷೇತ್ರದ ಶಾಸಕ ಯು ಟಿ ಖಾದರ್​ ವಿಧಾನಸಭೆಯ ಸ್ಪೀಕರ್​ ಆಗಲಿದ್ದಾರೆ.

ಯು ಟಿ ಖಾದರ್​ ಅವರು ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಹಿರಿತನ ಪರಿಗಣಿಸಿ ಖಾದರ್​ ಅವರನ್ನು ಸ್ಪೀಕರ್​ ಮಾಡಲು ಕಾಂಗ್ರೆಸ್​ ನಿರ್ಧರಿಸಿದೆ.

ಯು ಟಿ ಖಾದರ್​ ಅವರು ಈ ಹಿಂದೆ ಆರೋಗ್ಯ ಮತ್ತು ನಗರಾಭಿವೃದ್ಧಿ ಸಚಿವರಾಗಿದ್ದರು. ಕಳೆದ ವಿಧಾನಸಭೆಯಲ್ಲಿ ವಿರೋಧ ಪಕ್ಷದ ಉಪ ನಾಯಕರೂ ಆಗಿದ್ದರು,

ಆಡಳಿತ ಪಕ್ಷದವರೇ ಸ್ಪೀಕರ್​ ಆಗುವುದು ಮತ್ತು ಸ್ಪೀಕರ್​ ಆಯ್ಕೆ ಸರ್ವಾನುಮತದಿಂದ ನಡೆಯುವುದು ವಿಧಾನಸಭೆಯಲ್ಲಿ ನಡೆದುಕೊಂಡು ಬಂದಿರುವ ಪದ್ಧತಿ.

ಇವತ್ತು ಬೆಳಗ್ಗೆ 10.30ಕ್ಕೆ ಖಾದರ್​ ಅವರು ಸ್ಪೀಕರ್​ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ.