ಸಿದ್ದರಾಮಯ್ಯನವರೇ ಐದು ವರ್ಷ ಸಿಎಂ, ಡಿಕೆಶಿ ಸಿಎಂ ಆಗಲ್ಲ – ಮತ್ತೊಮ್ಮೆ ಸಚಿವ ಎಂಬಿಪಿ ಸುಳಿವು

ಈ ಬಾರಿ ಕರ್ನಾಟಕದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್​ ಮುಖ್ಯಮಂತ್ರಿ ಆಗಲ್ಲ ಎಂಬ ಸುಳಿವನ್ನು ಸಚಿವ ಎಂಬಿ ಪಾಟೀಲ್​ ಮತ್ತೊಮ್ಮೆ ಬಹಿರಂಗವಾಗಿ ನೀಡಿದ್ದಾರೆ.

ಬೆಂಗಳೂರಲ್ಲಿ ಮಾತಾಡಿದ ಸಚಿವ ಎಂಬಿ ಪಾಟೀಲ್​

ಪವರ್​ ಶೇರಿಂಗ್​​ (ಅಧಿಕಾರ ಹಂಚಿಕೆ) ಜನರ ಜೊತೆಗೆ ಎಂದು ವೇಣುಗೋಪಾಲ್​ ಅವರು ಹೇಳಿದ್ದಾರೆ. ದೆಹಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು, ನಾನು ಅದನ್ನೇ ಹೇಳಿದ್ದೇನೆ. ಇದು ನನ್ನ ವೈಯಕ್ತಿಕ ಹೇಳಿಕೆ ಅಲ್ಲ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್​ ಹೇಳಿದ್ದನ್ನೇ ನಾನು ಹೇಳಿದ್ದೇನೆ

ಎಂದು ಪುನರುಚ್ಚರಿಸಿದ್ದಾರೆ.

ನಿನ್ನೆಯಷ್ಟೇ ಮೈಸೂರಲ್ಲಿ ಮಾತಾಡಿದ್ದ ಎಂಬಿ ಪಾಟೀಲ್​.

ಅಧಿಕಾರ ಹಂಚಿಕೆ ಸೂತ್ರ ಏನಿಲ್ಲ. ಐದು ವರ್ಷ ಸಿದ್ದರಾಮಯ್ಯನವರೇ ಸಿಎಂ ಆಗಿರ್ತಾರೆ. ಸಿದ್ದರಾಮಯ್ಯನವರೇ ಪೂರ್ಣಾವಧಿ ಪೂರೈಸ್ತಾರೆ, ಒಂದು ವೇಳೆ ಅಧಿಕಾರ ಹಂಚಿಕೆ ಸೂತ್ರ ನಡೆದಿದ್ದರೆ ಅದನ್ನು ಪ್ರತಿಕಾಗೋಷ್ಠಿಯಲ್ಲೇ ಬಹಿರಂಗವಾಗಿ ಹೇಳ್ತಿದ್ದರು

ಎಂದು ಹೇಳಿದ್ದರು.