ಮುಂದಿನ ವರ್ಷದ ಕೊನೆಯ ಹೊತ್ತಿಗೆಲ್ಲಾ ರಾಜಸ್ಥಾನದ ಹೆದ್ದಾರಿಗಳನ್ನು ಅಮೆರಿಕಾವನ್ನು ನೆನಪಿಸುವಂತೆ ಮಾಡುತ್ತೇವೆ ಎಂದು ಕೇಂದ್ರ ಸಚಿವ ರಾಜನಾಥ್ ಸಿಂಗ್ ಭರವಸೆ ನೀಡಿದ್ದಾರೆ.
ರಾಜಸ್ಥಾನದ ರಸ್ತೆಗಳನ್ನು ಅಮೆರಿಕಾ ರೋಡ್ಗಳಂತೆ ಮಾಡುತ್ತೇವೆ.. ಈ ಮೂಲಕ ರಾಜಸ್ಥಾನ ಆನಂದದಾಯಕ ಮತ್ತು ಸುಸಂಪನ್ನ ರಾಜ್ಯವಾಗಿ ಅವತರಿಸಲಿದೆ ಎಂದು ಅವರು ತಿಳಿಸಿದ್ದಾರೆ.
ಹನುಮಘಡ ಜಿಲ್ಲೆಯ ಪಕ್ಕ ಷರ್ನಾ ಗ್ರಾಮದಲ್ಲಿ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ಕೊಟ್ಟರು. ಸೇತುಬಂಧನ್ ಯೋಜೆನಯ ಭಾಗವಾಗಿ 2050 ಕೋಟಿ ರೂ. ಮೊತ್ತದ ಆರು ರಾಷ್ಟ್ರೀಯ ಹೆದ್ದಾರಿಗಳು, ಏಳು ರೈಲ್ವೇ ಓವರ್ ಬಿಡ್ಜ್ಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು,
ಅಮೆರಿಕಾ ರಸ್ತೆಗಳು ಚನ್ನಾಗಿರುವುದಕ್ಕೆ ಕಾರಣ ಅಮೆರಿಕಾ ಶ್ರೀಮಂತ ದೇಶ ಎಂಬುದಲ್ಲ. ಅಮೆರಿಕಾ ರಸ್ತೆಗಳು ಚನ್ನಾಗಿರುವುದರಿಂದಲೇ ಅಮೆರಿಕಾ ಧನಿಕ ದೇಶವಾಗಿದೆ ಎಂದೆ ಈ ಹಿಂದೆ ಮಾಜಿ ಅಧ್ಯಕ್ಷ ಜಾನ್ ಎಫ್ ಕೆನಡಿ ಹೇಳಿಕೆ ನೀಡಿದ್ದರು
ಎಂದು ಗಡ್ಕರಿ ನೆನಪಿಸಿಕೊಂಡರು.
2024ರ ಕೊನೆಯ ಹೊತ್ತಿಗೆ ಅಮೆರಿಕಾ ರಸ್ತೆಗಳಿಗೆ ಸರಿಸಮಾನವಾಗಿ ರಾಜಸ್ಥಾನದ ಹೆದ್ದಾರಿಗಳು ಇರುತ್ತವೆ ಎಂದು ನಾನು ಈ ಮೂಲಕ ಭರವಸೆ ಕೊಡುತ್ತೇನೆ
ಎಂದು ನಿತಿನ್ ಗಡ್ಕರಿ ಹೇಳಿದರು.
ಸರ್ಕಾರ ಬದಲಾದರೇ ಸಮಾಜ ಬದಲಾಗುತ್ತದೆ. ಬಡತನ, ಹಸಿವು, ನಿರುದ್ಯೋಗ ಅಳಿಯಬೇಕು ಎಂದರು.
ADVERTISEMENT
ADVERTISEMENT