ಮಧ್ಯರಾತ್ರಿ ಟ್ರಕ್ನಲ್ಲಿ ರಾಹುಲ್ ಗಾಂಧಿ ಸಂಚಾರ.. ವ್ಯಾಪಕ ಮೆಚ್ಚುಗೆ

ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಬೇಕು ಎಂಬ ಉಮೇದಿನಲ್ಲಿರುವ ಎಐಸಿಸಿ ನಾಯಕ ರಾಹುಲ್ ಗಾಂಧಿ ಹಿಂದೆಂದಿಗಿಂತಲೂ ಜನರ ನಾಯಕ ಎನಿಸಿಕೊಳ್ಳತೊಡಗಿದ್ದಾರೆ.

ಜನಸಾಮಾನ್ಯರ ಜೊತೆ ಸಾಮಾನ್ಯರಂತೆ ಬೆರೆತು ಅವರ ಕಷ್ಟ ನಷ್ಟಗಳಿಗೆ ಕಿವಿಯಾಗುವ ಮೂಲಕ, ದನಿಯಾಗುವ ಮೂಲಕ ಜನನಾಯಕರಾಗಿ ಹೊರಹೊಮ್ಮುತ್ತಿದ್ದಾರೆ.

ರಾಹುಲ್ ಗಾಂಧಿಯವರನ್ನು ಅನರ್ಹಗೊಳಿಸಿದರೂ, ಅವರು ಜನಸೇವೆಯ ವಿಚಾರದಲ್ಲಿ ಮಾತ್ರ ಹಿಂದಡಿ ಇಟ್ಟಿಲ್ಲ.

ನಿನ್ನೆ ಮಧ್ಯರಾತ್ರಿ ಹರಿಯಾಣದ ಅಂಬಾಲದಲ್ಲಿ ರಾಷ್ಟ್ರೀಯ ಹೆದ್ದಾರಿ-1ರಲ್ಲಿ ಟ್ರಕ್​ನಲ್ಲಿ ಸಂಚರಿಸಿದ್ದಾರೆ. ಚಾಲಕರು, ಕೂಲಿ ಕಾರ್ಮಿಕರ ಜೊತೆ ಮಾತನಾಡಿ, ಅವರ ಸಮಸ್ಯೆಗಳನ್ನು ತಿಳಿದುಕೊಂಡಿದ್ದಾರೆ. ನಸುಕಿನ ಜಾವ ಗುರುದ್ವಾರಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಅಲ್ಲಿದ್ದ ಜನಸಾಮಾನ್ಯರೊಡನೆ ಬೆರೆತಿದ್ದಾರೆ. 

ಇದಕ್ಕೆ ಸಂಬಂಧಿಸಿದ ವಿಡಿಯೋಗಳು, ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಬಹುತೇಕ ನೆಟ್ಟಿಗರು ಮೆಚ್ಚುಗೆ ಸೂಚಿಸುತ್ತಿದ್ದಾರೆ.

ತಮ್ಮನ್ನು ಸಂಸದ ಸ್ಥಾನದಿಂದ ಲೋಕಸಭೆ ಕಾರ್ಯಾಲಯ ಅನರ್ಹಗೊಳಿಸಿದಾಗ,

ನೀವು ನನ್ನನ್ನು ಅನರ್ಹ ಮಾಡಬಹುದು.. ಜೀವನವಿಡಿ ನನ್ನನ್ನು ಅನರ್ಹ ಎಂದೇ ಪರಿಗಣಿಸಬಹುದು.. ಆದರೆ, ನೀವು ನನ್ನನ್ನು ತಡೆಯಲಾರಿರಿ

ಎಂಬ ಮಾತನ್ನು ರಾಹುಲ್ ಗಾಂಧಿ ಹೇಳಿದ್ದರು. ಅದೀಗ ನಿಜವಾಗುವಂತೆ ತೋರುತ್ತಿದೆ