ADVERTISEMENT
ಐಎಎಸ್ ರೋಹಿಣಿ ಸಿಂಧೂರಿ ಅವರನ್ನು ಎತ್ತಂಗಡಿ ಮಾಡಲಾಗಿದೆ. ಮುಜುರಾಯಿ ಇಲಾಖೆ ಆಯುಕ್ತೆಯಾಗಿದ್ದ ರೋಹಿಣಿ ಅವರಿಗೆ ಯಾವ ಹುದ್ದೆಯನ್ನು ನೀಡದೇ ಎತ್ತಂಗಡಿ ಮಾಡಲಾಗಿದೆ.
ಭೂ ದಾಖಲೆ ಮತ್ತು ಭೂ ಸರ್ವೇಕ್ಷಣ ಇಲಾಖೆಯ ಆಯುಕ್ತರಾಗಿದ್ದ ಮುನೀಶ್ ಮದ್ಗಿಲ್ ಅವರನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದೆ.
ಮುನೀಶ್ ಮೌದ್ಗಿಲ್ ಅವರು ಐಪಿಎಸ್ ಅಧಿಕಾರಿ ಡಿ ರೂಪಾ ಅವರ ಪತಿ.
ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಡಿ ರೂಪಾ ಅವರನ್ನೂ ಹುದ್ದೆ ತೋರಿಸದೇ ಎತ್ತಂಗಡಿ ಮಾಡಲಾಗಿದೆ.
ಡಿ ರೂಪಾ ವಿರುದ್ಧ ಕ್ರಮಕೈಗೊಳ್ಳುವಂತೆ ರೋಹಿಣಿ ಸಿಂಧೂರಿ ಮತ್ತು ರೋಹಿಣಿ ಸಿಂಧೂರಿ ವಿರುದ್ಧ ಕ್ರಮಕೈಗೊಳ್ಳುವಂತೆ ಡಿ ರೂಪಾ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಅವರಿಗೆ ಲಿಖಿತ ದೂರು ನೀಡಿದ್ದರು.
ಇತ್ತ ಮುನೀಶ್ ಮೌದ್ಗಿಲ್ ಅವರ ವಿರುದ್ಧ ಭೂ ದಾಖಲೆಗಳ ವೈಮಾನಿಕ ಸರ್ವೆಕ್ಷಣೆಗಾಗಿ ಡ್ರೋಣ್ ಬಳಸುವ ಸಂಬಂಧ ನೀಡಲಾಗಿರುವ ಟೆಂಡರ್ನಲ್ಲಿ ನಿಯಮ ಬದಲಾವಣೆ ಮಾಡುವ ಮೂಲಕ ಕೆಲವರಿಗೆ ಲಾಭ ಮಾಡಿಕೊಡಲಾಗಿದೆ ಎಂದು ಲೋಕಾಯುಕ್ತಕ್ಕೆ ದೂರು ಸಲ್ಲಿಕೆ ಆಗಿತ್ತು.
ಈ ಹಿಂದೆ ಸಿಂಧೂರಿ ಅವರಿಗೆ ಸಹಾಯ ಮಾಡಿದ್ದ ಮುನೀಶ್ ಮೌದ್ಗಿಲ್ ಅವರ ವಿರುದ್ಧ ಲೋಕಾಯಕ್ತದಲ್ಲಿ ದೂರುಗಳಿದ್ದರೂ ಮೌದ್ಗಿಲ್ ಅವರನ್ನು ವರ್ಗಾವಣೆ ಮಾಡದಂತೆ ಸಿಂಧೂರಿ ಅವರು ದೆಹಲಿಯಲ್ಲಿರುವ ತಮ್ಮ ಸಂಪರ್ಕದ ಪ್ರಭಾವ ಬಳಸಿದ್ದರು ಎಂಬ ಆರೋಪವೂ ಕೇಳಿಬಂದಿತ್ತು.
ADVERTISEMENT