ಕರ್ನಾಟಕ ಪೊಲೀಸ್ ಇಲಾಖೆ ತನ್ನ ಮೊಬೈಲ್ ಸೇವೆಯನ್ನು ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ನಿಂದ ಮುಖೇಶ್ ಅಂಬಾನಿ ಮಾಲೀಕತ್ವದ ಖಾಸಗಿ ಕಂಪನಿ ರಿಲಯನ್ಸ್ ಜಿಯೋಗೆ ಪೋರ್ಟ್ ಮಾಡಿಕೊಳ್ಳಲು ಆದೇಶ ಹೊರಡಿಸಿದೆ.
ಈ ಮೂಲಕ ಕರ್ನಾಟಕ ಪೊಲೀಸ್ ಇಲಾಖೆ ಬಳಸುತ್ತಿರುವ 38,347 ಮೊಬೈಲ್ ಸಂಪರ್ಕ ಬಿಎಸ್ಎನ್ಎಲ್ನಿಂದ ಜಿಯೋ ನೆಟ್ವರ್ಕ್ಗೆ ಬದಲಾಗಲಿದೆ ಎಂದು ಪ್ರಮುಖ ಇಂಗ್ಲೀಷ್ ದೈನಿಕ ದಿ ಹಿಂದೂ ಇವತ್ತು ತನ್ನ ವರದಿ ಪ್ರಕಟಿಸಿದೆ.
ಬಿಎಸ್ಎನ್ಎಲ್ನಿಂದ ಜಿಯೋಗೆ ಪೋರ್ಟ್ ಆಗಲು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಮೊಬೈಲ್ ನೆಟ್ವರ್ಕ್ ಸಂಪರ್ಕವನ್ನು ಜಿಯೋಗೆ ಪೋರ್ಟ್ ಮಾಡಲು ಪೊಲೀಸ್ ಇಲಾಖೆ ಆದೇಶ ಹೊರಿಡಿಸಿದೆ.
ಕರ್ನಾಟಕ ಪೊಲೀಸ್ ಇಲಾಖೆಯ ಸಂವಹನ ಮತ್ತು ಆಧುನೀಕರಣ ವಿಭಾಗದ ಎಡಿಜಿಪಿಯವರು ಸೋಮವಾರ ಬಿಎಸ್ಎನ್ಎಲ್ನಿಂದ ಜಿಯೋಗೆ ಮೊಬೈಲ್ ಸೇವೆಯನ್ನು ಪೋರ್ಟ್ ಮಾಡಿಕೊಳ್ಳುವಂತೆ ಆದೇಶದಲ್ಲಿ ತಿಳಿಸಿದ್ದಾರೆ.
ADVERTISEMENT
ADVERTISEMENT