IPS ಡಿ ರೂಪಾ- IAS ಮುನೀಶ್​ ಮೌದ್ಗೀಲ್​ ದಂಪತಿ ಬಳಿ ಇರುವ ಆಸ್ತಿ ಎಷ್ಟು..?

ಐಎಎಸ್​​ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದ ಐಪಿಎಸ್​​ ಡಿ ರೂಪಾ ಅವರು ಸಿಂಧೂರಿ ಅವರು ಬೆಂಗಳೂರಿನ ಜಾಲಹಳ್ಳಿಯಲ್ಲಿ ಕಟ್ಟಿಸುತ್ತಿರುವ ಭವ್ಯ ಬಂಗಲೆಯ ಬಗ್ಗೆ ತಮ್ಮ ಸ್ಥಿರಾಸ್ತಿ ದಾಖಲೆಗಳಲ್ಲಿ ಉಲ್ಲೇಖ ಮಾಡಿಲ್ಲ ಎಂದು ಆರೋಪಿಸಿದ್ದರು.

ಐಪಿಎಸ್​ ಡಿ ರೂಪಾ ಬಳಿ ಇರುವ ಆಸ್ತಿ ಎಷ್ಟು..?

ಹಾಗಾದರೆ ಐಜಿಪಿ ಶ್ರೇಣಿಯಲ್ಲಿರುವ ಐಪಿಎಸ್​ ಅಧಿಕಾರಿ ಡಿ ರೂಪಾ ಮತ್ತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ ವರ್ಗಾವಣೆಗೊಂಡಿರುವ ಅವರ ಪತಿ ಮುನೀಶ್​ ಮೌದ್ಗಿಲ್​ ಬಳಿ ಎಷ್ಟು ಆಸ್ತಿ ಇದೆ..?

ಅಖಿಲ ಭಾರತ ಸೇವಾ ನಿಯಮಗಳು – 1969ರ ಪ್ರಕಾರ ಐಎಎಸ್​ ಮತ್ತು ಐಪಿಎಸ್​ ಅಧಿಕಾರಿಗಳು ಪ್ರತಿ ವರ್ಷ ತಮ್ಮ ಬಳಿ ಇರುವ ಸ್ಥಿರಾಸ್ತಿ ಮತ್ತು ಚರಾಸ್ತಿಯ ಬಗ್ಗೆ, ತಮಗೆ ಸಿಕ್ಕಿರುವ ಉಡುಗೊರೆಗಳ ಬಗ್ಗೆ ಮಾಹಿತಿ ನೀಡುವುದು ಕಡ್ಡಾಯ.

2000ನೇ ಕರ್ನಾಟಕ ಕೇಡರ್​​ನ ಐಪಿಎಸ್​ ಅಧಿಕಾರಿ ಡಿ ರೂಪಾ ಅವರು 23 ವರ್ಷಗಳಿಂದ ಸೇವೆಯಲ್ಲಿದ್ದಾರೆ. ಅವರ ಬಳಿ ಎಷ್ಟು ಸ್ಥಿರಾಸ್ತಿ ಇದೆ ಎನ್ನುವ ಮಾಹಿತಿಯನ್ನು ಜನವರಿ 29, 2023ರಲ್ಲಿ ಸಲ್ಲಿಕೆ ಮಾಡಿದ್ದಾರೆ.

1.
ಬೆಂಗಳೂರು ನಗರದ ಬೆಂಗಳೂರು ಉತ್ತರ ತಾಲೂಕಿನ ಜಕ್ಕೂರಿನಲ್ಲಿ ಎಂಸಿಹೆಚ್​ಎಸ್​ (ಮೆಟ್ರೋಪಾಲಿಟನ್ ಸಿಟಿ​ ಹೌಸಿಂಗ್​ ಸೊಸೈಟಿ) ಲೇಔಟ್​ನಲ್ಲಿ 4,350 ಅಡಿ ವೀಸ್ತೀರ್ಣದ ಪ್ಲಾಟ್​ನ್ನು ಖರೀದಿಸಿದ್ದಾರೆ. ಖರೀದಿ ಆದ ವರ್ಷ ಡಿಸೆಂಬರ್​ 29, 2011.

ಈ ನಿವೇಶನವನ್ನು ಹಂಚಿಕೆ ಮಾಡಿದ್ದು ಅಖಿಲ ಭಾರತ ಸೇವೆಗಳ ಗೃಹ ಸಹಕಾರಿ ಸೊಸೈಟಿಯ ಮೂಲಕ. ಸೊಸೈಟಿ ಹಂಚಿಕೆ ಮಾಡಿದ್ದ ಈ ಜಾಗದ ಮೌಲ್ಯ 16 ಲಕ್ಷ ರೂಪಾಯಿ. ಈಗ ಇದರ ಮೌಲ್ಯ 20 ಲಕ್ಷ ರೂಪಾಯಿ. ಈ ಜಾಗ ಡಿ ರೂಪಾ ಅವರ ಹೆಸರಲ್ಲಿದೆ.

2. ಬೆಂಗಳೂರು ಉತ್ತರ ತಾಲೂಕಿನ ನಾಗವಾರದಲ್ಲಿರುವ ಮಾನ್ಯತಾ ಟೆಕ್​ ಪಾರ್ಕ್​ನಲ್ಲಿರುವ ಮಂತ್ರಿ ಲಿಥೋಸ್​ ಅಪಾರ್ಟ್​​ಮೆಂಟ್​ನಲ್ಲಿ ಫ್ಲ್ಯಾಟ್​ ಖರೀದಿ.

ಖರೀದಿ ಮಾಡಲಾದ ವರ್ಷ ಜೂನ್​ 25, 2021. ಉಳಿತಾಯದ ಹಣ ಮತ್ತು ಆದಿತ್ಯ ಬಿರ್ಲಾ ವಸತಿ ಹಣಕಾಸು ಕಂಪನಿಯಿಂದ ಸಾಲ ಪಡೆದು ಖರೀದಿಸಲಾಗಿದೆ. ಈ ಖರೀದಿ ಬಗ್ಗೆ ಜೂನ್​ 25, 2021ರಲ್ಲಿ ಸರ್ಕಾರಕ್ಕೆ ಲಿಖಿತ ಮಾಹಿತಿ ನೀಡಲಾಗಿದೆ.

ಖರೀದಿ ವೇಳೆ ಈ ಫ್ಲ್ಯಾಟ್​ನ ಮೌಲ್ಯ – ಎರಡೂವರೆ ಕೋಟಿ ರೂಪಾಯಿ. ಇದು ಡಿ ರೂಪಾ ಅವರ ಹೆಸರಲ್ಲೇ ಇದೆ.

ಡಿ ರೂಪಾ ಅವರ ವೇತನ ಶ್ರೇಣಿ: ಸೂಪರ್​ ಟೈಮ್​ ವೇತನ ಶ್ರೇಣಿ – 7ನೇ ವೇತನ ಆಯೋಗದ ಪ್ರಕಾರ ತಿಂಗಳಿಗೆ 1,40,000 ರೂ.

ಮುನೀಶ್​ ಮೌದ್ಗಿಲ್​ ಅವರ ಬಳಿ ಇರುವ ಅಸ್ತಿ:

ಇವರು 1998ರ ಬ್ಯಾಚ್​ ಕರ್ನಾಟಕ ಕೇಡರ್​ನ ಐಎಎಸ್​ ಅಧಿಕಾರಿ. ಭೂ ಸರ್ವೇಕ್ಷಣೆ ಮತ್ತು ಭೂ ದಾಖಲೆಗಳ ಇಲಾಖೆಯ ಆಯುಕ್ತರಾಗಿದ್ದ ಇವರನ್ನು ಈಗ ಸಿಬ್ಬಂಡಿ ಮತ್ತು ಆಡಳಿತಾತ್ಮಕ ಸುಧಾರಣಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಆಗಿ ವರ್ಗಾಯಿಸಿದೆ.

ಕಳೆದ ತಿಂಗಳು ಜನವರಿ 21ರಂದು ಇವರು ಸಲ್ಲಿಕೆ ಮಾಡಿರುವ ಸ್ಥಿರಾಸ್ತಿ ದಾಖಲೆಗಳ ಪ್ರಕಾರ ಇವರ ಬಳಿ ಇರುವ ಏಕೈಕ ಸ್ಥಿರಾಸ್ತಿ ಎಂದರೆ ತಂದೆಯಿಂದ ಬಂದ 4 ಎಕರೆ ಭೂಮಿ.

ಪಂಜಾಬ್​ ರಾಜ್ಯದ ಭಗತ್​ ಸಿಂಗ್​ ನಗರ ಬಚ್ಚಾವಾನ್​ನಲ್ಲಿರುವ ಈ ಭೂಮಿ ಮೌದ್ಗಿಲ್​ ಅವರಿಗೆ ಬಂದಿದ್ದು 2011ರಲ್ಲಿ. ಈ ಬಗ್ಗೆ ಮೌದ್ಗಿಲ್​ ಅವರು ಜೂನ್​ 4, 2011ರಂದು ಸರ್ಕಾರಕ್ಕೆ ಮಾಹಿತಿ ನೀಡಿದ್ದರು.

ತಮ್ಮ ತಂದೆ ತೀರಿಕೊಂಡ ಬಳಿಕ ವಂಶಪಾರ್ಯವಾಗಿ ಇರುವ ಆಸ್ತಿ ಬಗ್ಗೆ ಅಕ್ಟೋಬರ್​ 2006ರಲ್ಲಿ ಸರ್ಕಾರಕ್ಕೆ ಮಾಹಿತಿ ನೀಡಿದ್ದರು.

LEAVE A REPLY

Please enter your comment!
Please enter your name here