ADVERTISEMENT
ಕರ್ನಾಟಕ ಸೇರಿದಂತೆ ಮೂರು ರಾಜ್ಯಗಳ ಮೂರು ಸಹಕಾರಿ ಬ್ಯಾಂಕ್ಗಳಲ್ಲಿ ಗ್ರಾಹಕರು ಆರು ತಿಂಗಳ ಮಟ್ಟಿಗೆ ತಮ್ಮ ಠೇವಣಿ ಮೊತ್ತವನ್ನು ಡ್ರಾ ಮಾಡುವಂತಿಲ್ಲ ಎಂದು ಆರ್ಬಿಐ ನಿರ್ಬಂಧ ಹೇರಿದೆ.
ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿರುವ ಶಿಂಷಾ ಸಹಕಾರ ಬ್ಯಾಂಕ್ ನಿಯಮಿತದ ಮೇಲೆ ಆರ್ಬಿಐ ನಿರ್ಬಂಧ ಹೇರಿದೆ. ಈ ಸಹಕಾರ ಬ್ಯಾಂಕ್ನ ಗ್ರಾಹಕರು ತಾವು ಇಟ್ಟಿರುವ ಠೇವಣಿಯನ್ನು ಆರು ತಿಂಗಳು ಡ್ರಾ ಮಾಡುವಂತಿಲ್ಲ ಎಂದು ಆರ್ಬಿಐ ತನ್ನ ಆದೇಶದಲ್ಲಿ ತಿಳಿಸಿದೆ.
ಬ್ಯಾಂಕ್ನ ಆರ್ಥಿಕ ಸ್ಥಿತಿ ಹದೆಗಟ್ಟಿರುವ ಕಾರಣ ಆರ್ಬಿಐ ಈ ಆದೇಶ ಹೊರಡಿಸಿದೆ.
ಉತ್ತರಪ್ರದೇಶದ ಲಕ್ನೋದಲ್ಲಿರುವ ಹೆಚ್ಸಿಬಿಎಲ್ ಸಹಕಾರಿ ಬ್ಯಾಂಕ್, ಮಹಾರಾಷ್ಟ್ರ ರಾಜ್ಯದ ಔರಾಂಗಬಾದ್ನಲ್ಲಿರುವ ಆದರ್ಶ ಮಹಿಳಾ ನಾಗರಿ ಸಹಕಾರಿ ಬ್ಯಾಂಕ್ ಮೇಲೂ ಇದೇ ರೀತಿಯ ನಿರ್ಬಂಧ ಹೇರಲಾಗಿದೆ.
ಆಂಧ್ರಪ್ರದೇಶದ ಅನಂತಪುರನಲ್ಲಿರುವ ಊರ್ವಕೊಂಡ ಸಹಕಾರಿ ಟೌನ್ ಬ್ಯಾಂಕ್, ಮಹಾರಾಷ್ಟ್ರದಲ್ಲಿರುವ ಶಂಕರರಾವ್ ಮೊಹಿತೆ ಪಾಟೀಲ್ ಸಹಕಾರಿ ಬ್ಯಾಂಕ್ನ ಗ್ರಾಹಕರು ಗರಿಷ್ಠ 5 ಸಾವಿರ ರೂಪಾಯಿಯನ್ನು ಮಾತ್ರ ತಮ್ಮ ಉಳಿತಾಯ ಖಾತೆಯಿಂದ ಡ್ರಾ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ.
ಆರ್ಬಿಐನ ಪೂರ್ವಾನುಮತಿಯಲ್ಲದೇ ಈ ಐದು ಬ್ಯಾಂಕ್ಗಳು ಸಾಲವನ್ನು ನೀಡುವಂತಿಲ್ಲ.
ADVERTISEMENT