BREAKING: ಸಾಲದ ಮೇಲಿನ ಬಡ್ಡಿ ದರ, EMI ಇನ್ನಷ್ಟು ದುಬಾರಿ

ಜನಸಾಮಾನ್ಯರಿಗೆ ಭಾರತದ ಸರ್ವೋಚ್ಛ ಬ್ಯಾಂಕ್​ ಆರ್​ಬಿಐ ಆಘಾತ ನೀಡಿದೆ. ಇವತ್ತು ತನ್ನ ಹಣಕಾಸು ನೀತಿ ಪ್ರಕಟಿಸಿದ ಆರ್​ಬಿಐ ರೆಪೋ ದರವನ್ನು ಶೇಕಡಾ 0.25ರಷ್ಟು ಹೆಚ್ಚಳ ಮಾಡಿದೆ.
ರೆಪೋ ದರ ಹೆಚ್ಚಳದಿಂದ ಬ್ಯಾಂಕ್​ಗಳು ನೀಡುವ ವೈಯಕ್ತಿಕ ಸಾಲ, ಮನೆ ಸಾಲ, ಆಭರಣ ಸಾಲ, ವಾಹನ ಸಾಲ ಒಳಗೊಂಡಂತೆ ಎಲ್ಲ ಸಾಲದ ಮೇಲಿನ ಬಡ್ಡಿ ದರವನ್ನೂ ಬ್ಯಾಂಕುಗಳು ಏರಿಕೆ ಮಾಡಲಿವೆ.
ಮಾಸಿಕ ಸಾಲ ಕಂತು (EMI) ದುಬಾರಿ ಆಗಲಿದೆ.
ಸತತ ಆರನೇ ಬಾರಿ ಆರ್​ಬಿಐ ರೆಪೋ ದರವನ್ನು ಹೆಚ್ಚಳ ಮಾಡಿದೆ ಅಂದರೆ ರೆಪೋ ಶೇಕಡಾ 2.5ರಷ್ಟು ದುಬಾರಿ ಆಗಿದೆ.
ರೆಪೋ ದರ ಎಂದರೆ ಭಾರತದ ವಾಣಿಕ್ಯ ಬ್ಯಾಂಕುಗಳಿಗೆ ಆರ್​ಬಿಐ ನೀಡುವ ಸಾಲದ ಮೇಲೆ ವಿಧಿಸುವ ಬಡ್ಡಿ ದರ.
ಇವತ್ತಿನ ರೆಪೋ ದರ ಏರಿಕೆಯೊಂದಿಗೆ ಶೇಕಡಾವಾರು ರೆಪೋ ದರ ಶೇಕಡಾ 6.5ಕ್ಕೆ ಏರಿಕೆ ಆಗಿದೆ.
ಆರ್​ಬಿಐ ರೆಪೋ ದರ ಹೆಚ್ಚಳ ಮಾಡಿದ ಕೂಡಲೇ ಬ್ಯಾಂಕುಗಳೂ ಕೂಡಾ ತಮ್ಮ ಹೊರೆಯನ್ನು ಗ್ರಾಹಕರ ಮೇಲೆ ವರ್ಗಾಯಿಸುವ ಸಲುವಾಗಿ ಸಾಲದ ಮೇಲಿನ ಬಡ್ಡಿದರವನ್ನು ಹೆಚ್ಚಳ ಮಾಡುವುದು ವಾಡಿಕೆ.

LEAVE A REPLY

Please enter your comment!
Please enter your name here