ಕಳೆದ ಐದು ವರ್ಷಗಳಲ್ಲಿ ಕರ್ನಾಟಕದಲ್ಲಿ ವಾಹನ ಸವಾರರು ಮತ್ತು ಮಾಲೀಕರು ಎಷ್ಟು ಕೋಟಿ ರೂಪಾಯಿ ಟೋಲ್ ಅಥವಾ ರಸ್ತೆ ಶುಂಕ ಕಟ್ಟಿದ್ದಾರೆ ಗೊತ್ತಾ..? ಬರೋಬ್ಬರೀ 10 ಸಾವಿರ ಕೋಟಿ ರೂಪಾಯಿ.
ಯಾವ ವರ್ಷ ಎಷ್ಟು..?
2018-19: 1,830 ಕೋಟಿ ರೂ.
2019-20: 1,814 ಕೋಟಿ ರೂ.
2020-21 -1,800 ಕೋಟಿ ರೂ.
2021-22 -2,269 ಕೋಟಿ ರೂ.
202-23 – 2,268 ಕೋಟಿ ರೂ.
ಕೇಂದ್ರ ರಸ್ತೆ ಸಾರಿಗೆ ಸಚಿವಾಲಯದ ಅಂಕಿಅಂಶಗಳನ್ನು ವಿಶ್ಲೇಷಿಸಿ ಇಂಗ್ಲೀಷ್ ದೈನಿಕ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ವಿಶೇಷ ಎಂದರೆ ಐದು ವರ್ಷಗಳಲ್ಲಿ ಕಟ್ಟಲಾಗಿರುವ 10 ಸಾವಿರ ಕೋಟಿ ರೂಪಾಯಿಯಲ್ಲಿ (9,982 ಕೋಟಿ ರೂ.) ಮೊದಲ ಮೂರು ವರ್ಷದಲ್ಲಿ 5,444 ಕೋಟಿ ರೂಪಾಯಿ ಮೊತ್ತವನ್ನು ಟೋಲ್ ರೂಪದಲ್ಲಿ ಸಂಗ್ರಹಿಸಲಾಗಿದೆ.
ಆದರೆ ಉಳಿದ ಎರಡು ವರ್ಷಗಳಲ್ಲಿ ಅಂದರೆ ಕಳೆದ 2 ವರ್ಷಗಳಲ್ಲಿ ಬರೋಬ್ಬರೀ 4,537 ಕೋಟಿ ರೂಪಾಯಿ ಸಂಗ್ರಹಿಸಲಾಗಿದೆ.
ಒಂದೂವರೆ ಲಕ್ಷ ಕೋಟಿ ರೂಪಾಯಿ ಟೋಲ್ ಸಂಗ್ರಹ:
ಕಳೆದ ಐದು ವರ್ಷಗಳಲ್ಲಿ 2018ರ ಜನವರಿಯಿಂದ 2022ರ ಡಿಸೆಂಬರ್ ಅಂತ್ಯದವರೆಗೆ ದೇಶದಲ್ಲಿ ಸಂಗ್ರಹವಾಗಿರುವ ಟೋಲ್ ಮೊತ್ತ ಬರೋಬ್ಬರೀ ಒಂದೂವರೆ ಲಕ್ಷ ಕೋಟಿ ರೂಪಾಯಿ.
ಉತ್ತರಪ್ರದೇಶ: 17,242 ಕೋಟಿ ರೂ.
ರಾಜಸ್ಥಾನ: 16,565 ಕೋಟಿ ರೂ.
ಗುಜರಾತ್: 15,332 ಕೋಟಿ ರೂ.
ಮಹಾರಾಷ್ಟ್ರ: 13,043 ಕೋಟಿ ರೂ.
ತಮಿಳುನಾಡು: 12,738 ಕೋಟಿ ರೂ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮಗಳ ಪ್ರಕಾರ ಪ್ರತಿ ವರ್ಷ ಟೋಲ್ ಶುಲ್ಕದಲ್ಲಿ ಶೇಕಡಾ 3ರಷ್ಟು ಹೆಚ್ಚಳ ಮಾಡಲು ಅವಕಾಶ ಇದೆ.
ADVERTISEMENT
ADVERTISEMENT