ಕರ್ನಾಟಕದಲ್ಲಿ ಹೀನಾಯ ಸೋಲಿನ ಆತಂಕದಲ್ಲಿ ಬಿಜೆಪಿ

BJP
BJP
ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಗೆ ಕೆಲವೇ ದಿನಗಳು ಬಾಕಿ ಇರುವ ಹೊತ್ತಲ್ಲೇ ಆಡಳಿತ ಪಕ್ಷ ಬಿಜೆಪಿಗೆ ಹೀನಾಯ ಸೋಲಿನ ಆತಂಕ ಎದುರಾಗಿದೆ.
ಬಿಜೆಪಿ ನಡೆಸಿರುವ ಆಂತರಿಕ ಸಮೀಕ್ಷೆ, ಬಿಜೆಪಿ ಮಾತೃಸಂಘಟನೆ ಆರ್​ಎಸ್​​ಎಸ್​ ನಡೆಸಿರುವ ಸಮೀಕ್ಷೆಯಲ್ಲಿ ಬಿಜೆಪಿಗೆ ದೊಡ್ಡ ಪ್ರಮಾಣದಲ್ಲಿ ಸೀಟುಗಳ ನಷ್ಟ ಆಗಲಿದೆ ಎಂದು ಅಂದಾಜಿಸಲಾಗಿದೆ.
ಆರ್​ಎಸ್​ಎಸ್​ ಸಮೀಕ್ಷೆ:
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಮೀಕ್ಷೆಯ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿಗೆ 60ರಿಂದ 65 ಸೀಟುಗಳು ಬರಬಹುದು ಎಂದು ಅಂದಾಜಿಸಲಾಗಿದೆ.
2018ರ ಚುನಾವಣೆಯಲ್ಲಿ ಬಿಜೆಪಿ 104 ಸೀಟುಗಳನ್ನು ಗೆದ್ದಿತ್ತು.  ಆಪರೇಷನ್​ ಕಮಲದ ಬಳಿಕ ಉಪ ಚುನಾವಣೆಯಲ್ಲಿ ಬಿಜೆಪಿ ಅಧಿಕ ಸ್ಥಾನ ಗೆದ್ದಿದ್ದರಿಂದ ಬಿಜೆಪಿ ಬಲ ವಿಧಾನಸಭೆಯಲ್ಲಿ 117ಕ್ಕೆ ಏರಿಕೆ ಆಗಿತ್ತು.
ಅಂದರೆ ಆರ್​ಎಸ್​ಎಸ್​ ಸಮೀಕ್ಷೆಯ ಪ್ರಕಾರ ಬಿಜೆಪಿಗೆ 57ಕ್ಕೂ ಅಧಿಕ ಸ್ಥಾನಗಳು ನಷ್ಟ ಆಗುವ ಸಾಧ್ಯತೆ ಇದೆ.
ಬಿಜೆಪಿ ಸಮೀಕ್ಷೆ:
ಇನ್ನು ಬಿಜೆಪಿಯೇ ಪ್ರತ್ಯೇಕವಾಗಿ ನಡೆಸಿರುವ ಸಮೀಕ್ಷೆಯಲ್ಲಿ ಕರ್ನಾಟಕದಲ್ಲಿ ಪಕ್ಷದ ಸದ್ಯದ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಬಿಜೆಪಿ ಆಂತರಿಕ ಸಮೀಕ್ಷೆ ಪ್ರಕಾರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ 50ರಿಂದ 55 ಸೀಟುಗಳಷ್ಟೇ ಬರಬಹುದು ಲೆಕ್ಕ ಸಿಕ್ಕಿದೆ.
ಈ ಸಮೀಕ್ಷೆ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿಗೆ ಬರೋಬ್ಬರೀ 60ಕ್ಕೂ ಅಧಿಕ ಸೀಟುಗಳ ನಷ್ಟ ಅನುಭವಿಸುವ ಸಾಧ್ಯತೆ ಇದೆ.
ಮಹತ್ವ ಪಡೆದ ಸಿ ಟಿ ರವಿ ಹೇಳಿಕೆ:
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಮಾಜಿ ಸಚಿವ ಮತ್ತು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಸಿ ಟಿ ರವಿ ಅವರ ಪ್ರಕಾರ ಸದ್ಯಕ್ಕೆ ಬಿಜೆಪಿಗೆ ಗೆಲುವು ಖಚಿತವಾಗಿರುವ ಕ್ಷೇತ್ರಗಳು 60 ರಿಂದ 65 ಮಾತ್ರ.
ಎ ವರ್ಗದಲ್ಲಿ 60ರಿಂದ 65 ಸೀಟುಗಳನ್ನು ಬಿಜೆಪಿ ಗೆಲ್ಲುವುದು ಪಕ್ಕಾ ಆಗಿದೆ. ಇದು ಬಿಜೆಪಿ ಗೆಲ್ಲುವ ಕ್ಷೇತ್ರಗಳು. ಬಿ ವರ್ಗದಲ್ಲಿ 25ರಿಂದ 35 ಸೀಟುಗಳಿದ್ದು ಇವುಗಳ ಮೇಲೆ ಹೆಚ್ಚು ಶ್ರಮ ಹಾಕಬೇಕಿದೆ. ಸಿ ಮತ್ತು ಡಿಯಲ್ಲಿರುವ ಕ್ಷೇತ್ರಗಳು ಕಾಂಗ್ರೆಸ್​​ ಮತ್ತು ಜೆಡಿಎಸ್​ ಕ್ಷೇತ್ರಗಳು
ಎಂದು ಸಿ ಟಿ ರವಿ ಹೇಳಿದ್ದಾರೆ.
ಈ ಲೆಕ್ಕಾಚಾರದಲ್ಲಿ ನೋಡೋದಾದ್ರೆ ಬಿಜೆಪಿಗೆ ಈಗ ಗೆಲ್ಲಬಹುದು ಎಂದು ಖಾತ್ರಿ ಆಗಿರುವ ಕ್ಷೇತ್ರಗಳು 65 ಅಷ್ಟೇ.
ಕಾಂಗ್ರೆಸ್​ ಲೆಕ್ಕಾಚಾರ:
ಕಾಂಗ್ರೆಸ್​ ಲೆಕ್ಕಾಚಾರ ಪ್ರಕಾರ ಕರ್ನಾಟಕದಲ್ಲಿ ಕಾಂಗ್ರೆಸ್​ 135 ಸೀಟುಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದೆ. ನಾನು ಎರಡು ಬಾರಿ ಸಮೀಕ್ಷೆ ಮಾಡಿಸಿದ್ದೇನೆ, 160 ಸೀಟು ಬರುತ್ತೆ. 135 ಸೀಟಂತೂ ಬಂದೇ ಬರುತ್ತೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್​ ಹೇಳಿದ್ದಾರೆ.

LEAVE A REPLY

Please enter your comment!
Please enter your name here