ನಾ ಕಾವುಂಗಾ ನಾ ಖಾನೆ ದುಂಗಾ ಎಂಬುದು ಪ್ರಧಾನಿ ಮೋದಿ ಡೈಲಾಗ್. ಆದರೇ ಇದು ಘೋಷಣೆಗಷ್ಟೇ ಸೀಮಿತವಾಗಿದೆ. ಕಳೆದ 9 ತಿಂಗಳಿಂದ ಕರ್ನಾಟಕ ಸರ್ಕಾರದ ವಿರುದ್ಧ ಗುತ್ತಿಗೆದಾರರ ಸಂಘ 40% ಕಮಿಷನ್ ಆರೋಪ ಮಾಡುತ್ತಿದೆ. ಪ್ರಧಾನಿ ಮೋದಿಗೂ ಪತ್ರ ಬರೆದಿದೆ. ಆದರೇ ಫಲಿತಾಂಶ ಮಾತ್ರ ಶೂನ್ಯ. ಹೀಗಾಗಿ ಇದನ್ನು ಕಾಂಗ್ರೆಸ್ ಅಸ್ತ್ರ ಮಾಡಿಕೊಂಡಿದೆ. ಪ್ರಧಾನಿ ಮೋದಿಗೆ ಹಲವು ಪ್ರಶ್ನೆ ಕೇಳಿದೆ.
ಉತ್ತರಿಸುವರಾ?
ಪ್ರಶ್ನೆ 1- , 2021ರ ಜುಲೈ 6ರಂದು ಬಿಜೆಪಿ ಮಂತ್ರಿಗಳು/ಶಾಸಕರ ವಿರುದ್ಧದ “40% ಕಮಿಷನ್” ಆರೋಪದ ದೂರಿನ ಪತ್ರವನ್ನು ತೆಗೆದುಕೊಂಡಿಲ್ಲವೇಕೆ?
ಪ್ರಶ್ನೆ 2 – ಲಂಚ ಮತ್ತು 40% ಕಮಿಷನ್ ಕುರಿತು ಹಿಂದೂ ವಾಹಿನಿ ನಾಯಕರ ಪತ್ರಕ್ಕೆ ಪ್ರತಿಕ್ರಿಯೆ ಇಲ್ಲವೇಕೆ?
ಪ್ರಶ್ನೆ 3 – ಸಿಎಂ ಬೊಮ್ಮಾಯಿ ಮೌನವೇಕೆ?
ಪ್ರಶ್ನೆ 4 – ಲೂಟಿಯಲ್ಲಿ ಎಲ್ಲಾ ಪಾಲುದಾರರೇ? ಎಂದು ಕಾಂಗ್ರೆಸ್ ಕೇಳಿದೆ.
ರಾಜ್ಯದಲ್ಲಿ ಬೊಮ್ಮಾಯಿ ನೇತೃತ್ವದಲ್ಲಿ ಅತ್ಯಂತ ಭ್ರಷ್ಟ, 40% ಕಮಿಷನ್ ಸರ್ಕಾರವಿದೆ. 50,000 ಗುತ್ತಿಗೆದಾರರು ಪ್ರತಿಭಟನೆ ನಡೆಸಿದರೂ, ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಪ್ರಧಾನಿಗೆ ಪತ್ರ ಬರೆದರೂ ಸ್ಪಂದಿಸಿಲ್ಲ. ಇದು ಲಜ್ಜೆಗೆಟ್ಟ ಸರ್ಕಾರ ಎಂದು ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸಿದ್ದಾರೆ.