ಬೆಲೆ ಏರಿಕೆ ಬಗ್ಗೆ ಮಾಧ್ಯಮಗಳು ಪ್ರಧಾನಿ ಮೋದಿ ಸರ್ಕಾರ ಪ್ರಶ್ನೆ ಮಾಡ್ತಾವಾ ಅಥವಾ ವಿರೋಧಪಕ್ಷಗಳನ್ನೇ ಟಾರ್ಗೆಟ್ ಮಾಡ್ಕೊಂಡು ಇರ್ತಾವಾ ಎಂದು ರಾಜ್ಯಸಭೆಯಲ್ಲಿ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾಧ್ಯಮಗಳಿಗೆ ಕಟು ಪ್ರಶ್ನೆಗಳನ್ನು ಕೇಳಿದ್ದಾರೆ.
`ಅಡುಗೆ ಅನಿಲ, ಔಷಧ ಮತ್ತು 7 ದಿನಗಳಲ್ಲಿ ಆರು ಬಾರಿ ಇಂಧನ ಬೆಲೆ ಹೆಚ್ಚಳ ಮಾಡಿರುವುದಕ್ಕೆ ಪ್ರಧಾನಿ ಮೋದಿಯವರನ್ನು ನೇರವಾಗಿ ಮಾಧ್ಯಮಗಳು ಪ್ರಶ್ನೆ ಮಾಡ್ತಾವಾ ಅಥವಾ ವಿಪಕ್ಷಗಳನ್ನು ಟಾರ್ಗೆಟ್ ಮಾಡುವುದರಲ್ಲೇ ಮಾಧ್ಯಮಗಳು ಖುಷಿ ಅನುಭವಿಸ್ತವಾ..?’ ಎಂದು ಖರ್ಗೆ ಪ್ರಶ್ನಿಸಿದ್ದಾರೆ.
ಇತ್ತ ಬೆಲೆ ಏರಿಕೆ ಬಗ್ಗೆ ಟ್ವೀಟಿಸಿರುವ ಖರ್ಗೆ ಪುತ್ರ ಮತ್ತು ಮಾಜಿ ಸಚಿವ, ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ `ಕೇಸರಿ ಶಾಲಿನ ಮರೆಯಲ್ಲಿ ಇಷ್ಟೆಲ್ಲ ನಡೆಯುತ್ತಿವೆ’ ಎಂದು ಹೇಳಿ ಬೆಲೆ ಏರಿಕೆ, ಭ್ರಷ್ಟಾಚಾರ, ಬಿಜೆಪಿ ಶಾಸಕ ರೇಣುಕಾಚಾರ್ಯ ಮಗಳ ಜಾತಿ ಪ್ರಮಾಣಪತ್ರ ಅಕ್ರಮಗಳ ಬಗ್ಗೆ ಟಿಪ್ಪಣಿ ಮಾಡಿದ್ದಾರೆ.
ಕೇಸರಿ ಶಾಲಿನ ಮರೆಯಲ್ಲಿ ಇಷ್ಟೆಲ್ಲ ನಡೆಯುತ್ತಿವೆ.
◆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ◆ಗ್ಯಾಸ್ ಬೆಲೆ ಏರಿಕೆ ◆ರಾಜ್ಯದ ಸಾಲ ಏರಿಕೆ ◆ಅಡುಗೆ ಎಣ್ಣೆ ದರ ಏರಿಕೆ ◆ನಕಲಿ ಜಾತಿ ಸರ್ಟಿಫಿಕೇಟ್ ◆ಮಿತಿಮೀರಿದ 40% ಕಮಿಷನ್ ◆ಸಚಿವರ ಲಂಚಾವತಾರ ◆ರೈತರಿಗೆ ಮೋಸ ◆ಯುವಕರಿಗೆ ನಿರುದ್ಯೋಗ ◆ಸಿಗದ ನೆರೆ ಪರಿಹಾರ ◆ಕುಸಿದ ಆರ್ಥಿಕತೆ