ಸರ್ಕಾರಿ ಸ್ವಾಮ್ಯದ IOCL ಪೆಟ್ರೋಲ್, ಡೀಸೆಲ್ ಬೆಲೆಯನ್ನು ಮತ್ತೆ ಹೆಚ್ಚಿಸಿದೆ. ಪ್ರತಿ ಲೀಟರ್ ಪೆಟ್ರೋಲ್ ಬೆಲೆಯಲ್ಲಿ 80 ಪೈಸೆ, ಪ್ರತಿ ಲೀಟರ್ ಡೀಸೆಲ್ ಬೆಲೆಯಲ್ಲಿ 70 ಪೈಸೆ ಹೆಚ್ಚಳ ಆಗಿದೆ.
ಪರಿಣಾಮ ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ಬೆಲೆ Rs 105.61 ಆಗಿದ್ದರೆ, ಡೀಸೆಲ್ ಬೆಲೆ Rs 89.67 ರೂಪಾಯಿ ಆಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕುಸಿತ ಕಂಡಿದ್ದರೂ ದೇಶಿಯವಾಗಿ ಮಾತ್ರ ತೈಲ ಬೆಲೆ ಏರಿಕೆ ಮಾಡಲಾಗುತ್ತಿದೆ. ಇದನ್ನು ಖಂಡಿಸಿ ವಿರೋಧ ಪಕ್ಷಗಳು ನಿತ್ಯ ಪ್ರತಿಭಟನೆ ಮಾಡುತ್ತಿವೆ. ಆದರೇ ಕೇಂದ್ರ ಸರ್ಕಾರ ಪ್ರತಿಕ್ರಿಯೆ ನೀಡುತ್ತಿಲ್ಲ.