ADVERTISEMENT
ಲೋಕಸಭಾ ಚುನಾವಣೆ ವೇಳೆ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಹಾಕಿಕೊಂಡಿದ್ದ ಮೋದಿ ಕೀ ಪರಿವಾರ್ ಎಂಬ ಉಪನಾಮವನ್ನು ತೆಗೆಯಲಾಗಿದೆ.
ಈ ಬಗ್ಗೆ ಸ್ವತ: ಪ್ರಧಾನಿ ನರೇಂದ್ರ ಮೋದಿಯವರೇ ಹೇಳಿಕೊಂಡಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಎನ್ಡಿಎಗೆ ಬಹುಮತ ನೀಡಿದ್ದಾರೆ. ಮೋದಿ ಕೀ ಪರಿವಾರ್ ಎಂಬ ಮೂಲಕ ಒಂದೇ ಕುಟುಂಬ ಎಂಬ ಸಂದೇಶ ಸಮರ್ಥವಾಗಿ ರವಾನೆಯಾಗಿದೆ. ಭಾರತೀಯರಿಗೆ ಧನ್ಯವಾದ ಹೇಳುತ್ತಿದ್ದೇನೆ ಮತ್ತು ಮೋದಿ ಕೀ ಪರಿವಾರ್ ಎಂಬುದನ್ನು ನೀವು ತೆಗೆದುಬಹುದು ಎಂದು ಹೇಳುತ್ತಿದ್ದೇನೆ. ಆದರೆ ಭಾರತದ ಪ್ರಗತಿಗೆ ನಮ್ಮ ಒಗ್ಗಟ್ಟು ಭದ್ರವಾಗಿಯೇ ಉಳಿದುಕೊಳ್ಳಲಿದೆ ಎಂದು ಪ್ರಧಾನಿ ಹೇಳಿದ್ದಾರೆ.
ಜೊತೆಗೆ ನರೇಂದ್ರ ಮೋದಿ ಖಾತೆಯ ತಮ್ಮ ಡಿಪಿಯನ್ನೂ ಪ್ರಧಾನಿ ಬದಲಾಯಿಸಿದ್ದಾರೆ. ಹಳದಿ ಬಣ್ಣದ ಧಿರಿಸು ಧರಿಸುವ ಫೋಟೋವನ್ನು ಡಿಪಿಯಾಗಿ ಅಪ್ಡೇಟ್ ಮಾಡಿದ್ದಾರೆ.
ADVERTISEMENT