ಸಿದ್ದರಾಮಯ್ಯ ಸಿಎಂ ಆಗಲು ನಾನು ಕಾಂಗ್ರೆಸ್​ಗೆ ಸೇರುತ್ತಿದ್ದೇನೆ – ಎಂಎಲ್​ಸಿ ವಿಶ್ವನಾಥ್​ ಪುತ್ರ ಪೂರ್ವಜ್​ ವಿಶ್ವನಾಥ್​

ಮಾಜಿ ಸಚಿವ ಮತ್ತು ವಿಧಾನಪರಿಷತ್​ನ ನಾಮನಿರ್ದೇಶಿತ ಎಂಎಲ್​ಸಿ ಆಗಿರುವ ಎಚ್​ ವಿಶ್ವನಾಥ್​ ಅವರ ಪುತ್ರ ಪೂರ್ವಜ್​ ವಿಶ್ವನಾಥ್​ ಅವರು ಕಾಂಗ್ರೆಸ್​ ಪಕ್ಷ ಸೇರಲಿದ್ದಾರೆ.

ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ತಗಡೂರು ಗ್ರಾಮದಲ್ಲಿ ಮಾತಾಡಿದ ಪೂರ್ವಜ್​ ವಿಶ್ವನಾಥ್​ ಅವರು ಕಾಂಗ್ರೆಸ್​ ಸೇರ್ಪಡೆ ಬಗ್ಗೆ ಸಿದ್ದರಾಮಯ್ಯನವರ ಗಮನಕ್ಕೆ ತಂದಿದ್ದೇನೆ. ಅವರು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ. ನನ್ನ ತಂದೆಗೂ ತಿಳಿಸಿದ್ದೇನೆ. ತಂದೆ ವಿಶ್ವನಾಥ್​​ ಅವರು ಕಾಂಗ್ರೆಸ್​​ ಸೇರುವುದು ನಿನ್ನ ಇಷ್ಟಕ್ಕೆ ಬಿಟ್ಟಿದ್ದು

ಎಂದು ಪೂರ್ವಜ್​ ವಿಶ್ವನಾಥ್​ ಹೇಳಿದ್ದಾರೆ.

ಸಿದ್ದರಾಮಯ್ಯರ ಕೈ ಬಲಪಡಿಸಲು ಕಾಂಗ್ರೆಸ್‌ ಸೇರ್ಪಡೆಯಾಗ್ತಿದ್ದೇನೆ. ಸಿದ್ದರಾಮಯ್ಯ ಮುಂದಿನ ಸಿಎಂ ಆಗಲು ಅವರ ಜೊತೆಯಲ್ಲಿ ನಿಲ್ಲುತ್ತೇನೆ. ದಾವಣಗೆರೆಯಲ್ಲಿ ನಡೆದ ಕಾರ್ಯಕ್ರಮಕ್ಕೂ ನಾನು ಹೋಗಿದ್ದೆ‌. ಮುಂದೆ ಸಿದ್ದರಾಮಯ್ಯ ಸಿಎಂ ಆಗುವ ಎಲ್ಲಾ ವಾತಾವರಣ ಇದೆ

ಎಂದು ತಗಡೂರಿನ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಪೂರ್ವಜ್ ವಿಶ್ವನಾಥ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here