ಮಹಾಮೈತ್ರಿ ಸರ್ಕಾರವನ್ನು ಉರುಳಿಸಿ ಸರ್ಕಾರ ರಚನೆ ಮಾಡಿದ 39 ದಿನಗಳ ಬಳಿಕ ಇದೇ ಮೊದಲ ಬಾರಿಗೆ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಬಂಡಾಯ ಮತ್ತು ಬಿಜೆಪಿ ಸರ್ಕಾರದ ಸಂಪುಟ ರಚನೆಗೆ ಇವತ್ತು ಕಾಲ ಕೂಡಿಬಂದಿದೆ.
ಇವತ್ತು 18 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಬಿಜೆಪಿಯ 10ರಿಂದ 11 ಮಂದಿ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಏಕನಾಥ್ ಶಿಂಧೆ ಬಣದ ಆರರಿಂದ ಏಳು ಮಂದಿ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಎರಡ್ಮೂರು ವಾರಗಳ ಬಳಿಕ ಎರಡನೇ ಹಂತದಲ್ಲಿ ಸಂಪುಟ ವಿಸ್ತರಣೆ ಆಗುವ ಸಾಧ್ಯತೆ ಇದೆ.
ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಸಚಿವರಾಗಲಿದ್ದಾರೆ. ಸುಧೀರ್ ಮುಂಗಂತಿವಾರ್, ರಾಧಾಕೃಷ್ಣ ವೀಖೆ ಪಾಟೀಲ್, ಗಿರೀಶ್ ಮಹಾಜನ್, ಮಂಗಲ್ ಪ್ರಭಾತ್ ಲೋಧಾ, ಅತುಲ್ ಸಾವೆ, ಸುರೇಶ್ ಖಾಡೆ ಸಚಿವರಾಗುವ ಸಾಧ್ಯತೆ ಇದೆ.
ಶಿಂಧೆ ಬಣದಿಂದ ಉದಯ್ ಸಾಮಂತ್, ಸಾಂದಪೀಯನ್ ಭುಮ್ರೆ, ದಾದಾಜಿ ಭೂಸೆ, ಗುಲಾಬ್ ಪಾಟೀಲ್, ಶಂಭುರಾಜ್ ದೇಸಾಯಿ, ದೀಪಕ್ ಕೇಸರ್ಕರ್, ಸಂಜಯ್ ಶ್ರೀಸಾತ್ ಸಚಿವರಾಗುವ ನಿರೀಕ್ಷೆ ಇದೆ.