ಅಯ್ಯೋ.. ನನ್ ಹೆಂಡ್ತಿ ಹೊಡಿತಿದ್ದಾಳೆ ಕಾಪಾಡಿ..  ಪ್ರಧಾನಿಗೆ ಬೆಂಗಳೂರು ಭೂಪನ ಮೊರೆ

ನನ್ ಹೆಂಡ್ತಿ ಹೊಡಿತಿದ್ದಾಳೆ.. ಚಾಕುವಿಂದ ದಾಳಿ ಮಾಡಿದ್ದಾಳೆ ನೋಡಿ.. ನನ್ ಕೈ ಎಲ್ಲಾ ರಕ್ತಸಿಕ್ತವಾಗಿದೆ.. ದಯವಿಟ್ಟು ನನ್ನನ್ನು ಕಾಪಾಡಿ ಎಂದು ಪ್ರಧಾನಿ ಮೋದಿ ಸೇರಿ ಹಲವರಿಗೆ ಬೆಂಗಳೂರಿನ ಪಾಪದ ಗಂಡನೊಬ್ಬ ಮೊರೆ ಇಟ್ಟಿದ್ದಾನೆ.

ಹೀಗೆ ಮನೆಯ ಗುಟ್ಟನ್ನು ಬಹಿರಂಗ ಪಡಿಸಿದ ಬಾಧಿತನ ಹೆಸರು ಯದುನಂದನ್ ಆಚಾರ್ಯ.. ಮೂಲ ಮುಂಬೈನವರಾದರೂ ಬದುಕು ಕಟ್ಟಿಕೊಂಡಿರೋದು ಬೆಂಗಳೂರಿನಲ್ಲಿ.

ಭಾನುವಾರ ತನ್ನ ಮೇಲೆ ಹೆಂಡತಿ ನಡೆಸಿರುವ ದಾಳಿ ಬಗ್ಗೆ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ನನಗೆ ಯಾರ ಸಹಾಯವೂ ಸಿಗಲ್ಲ ಎನ್ನುವುದು ಗೊತ್ತು. ಯಾಕಂದ್ರೆ ನಾನೊಬ್ಬ ಪುರುಷ. ನಾರಿ ಶಕ್ತಿ ಪ್ರಭಾವದ ಕಾರಣ ನನ್ನ ಕೈಗೆ ಗಾಯವಾಗಿದೆ ಎಂದು ರಕ್ತ ಸೋರುತ್ತಿರುವ ಫೋಟೋ ವನ್ನು ಯದುನಂದನ್ ಆಚಾರ್ಯ ಟ್ವಿಟ್ಟರ್ ನಲ್ಲಿ ಷೇರ್ ಮಾಡಿದ್ದಾರೆ.

ಯದುನಂದನ್ ಆಚಾರ್ಯ, ನನ್ನ ಮೇಲೆ ನಡೆದ ದಾಳಿಯನ್ನು ಪರಿಗಣಿಸಿ ಗೃಹ ಹಿಂಸೆಯಡಿ ಪ್ರಕರಣ ದಾಖಲಿಸಬೇಕೆಂದು ಪ್ರಧಾನಮಂತ್ರಿ ಕಾರ್ಯಲಯ, ಕೇಂದ್ರ ಮಂತ್ರಿ ಕಿರಣ್ ರಿಜಿಜು, ಬೆಂಗಳೂರು ಪೊಲೀಸ್ ಕಮಿಷನರ್ ಗೆ ಮನವಿ ಮಾಡಿ ಟ್ವೀಟ್ ಅನ್ನು ಟ್ಯಾಗ್ ಮಾಡಿದ್ದಾರೆ.

ಇದಕ್ಕೆ ಸ್ಪಂದಿಸಿರುವ ಬೆಂಗಳೂರು ಪೊಲೀಸರು, ಏನಾಯ್ತು ಎಂದು ಭೌತಿಕವಾಗಿ ದೂರು ನೀಡಿ ಎಂದು ಸೂಚನೆ ನೀಡಿರೋದು ವಿಶೇಷ. ಇನ್ನು, ನೊಂದ ಪತಿಯರು ಯದುನಂದನ್ ಆಚಾರ್ಯ ಬೆಂಬಲಕ್ಕೆ ಧಾವಿಸಿದ್ದಾರೆ.