ಯತ್ನಾಳ್ ಗೆ ಮುಖಭಂಗ – ವಿಜಯಪುರ ಪಾಲಿಕೆ ಅತಂತ್ರ

ಅಸೆಂಬ್ಲಿ ಚುನಾವಣೆ ಸನಿಹದಲ್ಲಿ ವಿಜಯಪುರ ಮಹಾ ನಗರ ಪಾಲಿಕೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ತೀವ್ರ ಮುಖಭಂಗಕ್ಕೆ ಒಳಗಾಗಿದ್ದಾರೆ.

ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶ ಹೊರಬಂದಿದೆ. ಯಾವ ಪಕ್ಷವು ಕೂಡ ಬಹುಮತ ಗಳಿಸಿಲ್ಲ. ಗಮನಿಸಬೇಕಾದ ವಿಷಯ ಎಂದರೇ ಎಮ್ ಐ ಎಮ್ ಪಕ್ಷ ಇಲ್ಲಿ ಎರಡು ಕಡೆ ಗೆದ್ದಿದೆ.

17ರಲ್ಲಿ ಬಿಜೆಪಿ, 10ರಲ್ಲಿ ಕಾಂಗ್ರೆಸ್, 1 ಕಡೆ ಜೆಡಿಎಸ್,  5ರಲ್ಲಿ ಪಕ್ಷೇತರರು ಗೆಲುವು ಕಂಡಿದ್ದಾರೆ.

ಗೆದ್ದ ಅಭ್ಯರ್ಥಿಗಳು ಮತ್ತು ಬೆಂಬಲಿಗರು ಸಂಭ್ರಮಾಚರಣೆ ಮಾಡಿದ್ದಾರೆ. ಸರಳ ಬಹುಮತಕ್ಕಿಂತ ಒಂದು ಸ್ಥಾನ ಕಡಿಮೆ ಗಳಿಸಿರುವ ಬಿಜೆಪಿ, ಪಕ್ಷೇತರರ ನೆರವಿನಿಂದ ಗದ್ದುಗೆ ಹಿಡಿಯಲು ಕಸರತ್ತು ಆರಂಭಿಸಿದೆ.

LEAVE A REPLY

Please enter your comment!
Please enter your name here