ಅತ್ತ ಅದಾನಿ, ಇತ್ತ ಪತಂಜಲಿ ಷೇರುಗಳ ಮೌಲ್ಯವೂ ಕುಸಿತ..!

ಒಂದೆಡೆ ಅಮೆರಿಕದ ಹಿಂಡೆನ್​​ಬರ್ಗ್​​ ವರದಿಯ ಕಾರಣದಿಂದ ದೈತ್ಯ ಉದ್ಯಮಿ ಗೌತಮ್​ ಅದಾನಿ ಕಂಪನಿಯ ಷೇರುಗಳು ಪಾತಾಳಕ್ಕೆ ಕುಸಿದು ಷೇರುದಾರರಿಗೆ 9 ಲಕ್ಷ ಕೋಟಿ ರೂಪಾಯಿ ನಷ್ಟ ಆದ ನಡುವೆಯೇ ಇತ್ತ ಯೋಗ ಬಾಬಾರಾಮ್​ದೇವ್​ ಮಾಲೀಕತ್ವದ ಪತಂಜಲಿ ಫುಡ್​ ಪ್ರಾಡಕ್ಸ್ಟ್​ ಕಂಪನಿಯ ಷೇರುಗಳು ಪಾತಾಳಕ್ಕೆ ಕುಸಿದಿವೆ.

ಪತಂಜಲಿ ಫುಡ್​​ ಷೇರುಗಳ ಕುಸಿತದಿಂದ ಷೇರು ಹೂಡಿಕೆದಾರರಿಗೆ 7 ಸಾವಿರ ಕೋಟಿ ರೂಪಾಯಿಯಷ್ಟು ನಷ್ಟವಾಗಿದೆ.

ಜನವರಿ 27ರಂದು ಪತಂಜಲಿ ಕಂಪನಿಯ ಷೇರು ಮೌಲ್ಯ 1,102 ರೂಪಾಯಿ ಇತ್ತು. ಆದರೆ ಈಗ ಈ ಷೇರಿನ ಮೌಲ್ಯ 903 ರೂಪಾಯಿಗೆ ಕುಸಿದಿದೆ.

ಪತಂಜಲಿ ಫುಡ್​ ಕಂಪನಿಯ ಆದಾಯ ಹೆಚ್ಚಳವಾಗಿದ್ದರೂ ಷೇರು ಮೌಲ್ಯ ಕುಸಿದಿರುವುದು ವಿಶೇಷ. ಪತಂಜಲಿ ಕಂಪನಿ ಆದಾಯ ಡಿಸೆಂಬರ್​ ಅಂತ್ಯಕ್ಕೆ ಕೊನೆಯಾದ ಮೂರನೇ ತ್ರೈಮಾಸಿಕ ಅವಧಿಯಲ್ಲಿ 269 ಕೋಟಿ ರೂಪಾಯಿಯಷ್ಟು ಏರಿದೆ. 2021ರಲ್ಲಿ ಇದೇ ಅವಧಿಯಲ್ಲಿ 234 ಕೋಟಿ ರೂಪಾಯಿಯಷ್ಟು ಲಾಭ ಗಳಿಸಿತ್ತು.

LEAVE A REPLY

Please enter your comment!
Please enter your name here