28 ಅಲ್ಲ.. ಇಂದು 8 ಮಂದಿಯಷ್ಟೇ ಸಚಿವರಾಗಿ ಪ್ರಮಾಣ… ಯಾರವರು..?

ಶಿವರಾಮ ಆಡಳಿತ ಇಂದಿನಿಂದ ಶುರುವಾಗಲಿದೆ. ಇಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮಧ್ಯಾಹ್ನ 12.30ಕ್ಕೆ ಸರಿಯಾಗಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಜೊತೆ 28 ಶಾಸಕರು ಸಚಿವರಾಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ತಡರಾತ್ರಿವರೆಗೂ ದೆಹಲಿಯಲ್ಲಿ ಸಭೆಗಳ ನಡೆದರೂ, 28 ಮಂತ್ರಿ ಸ್ಥಾನ ಹಂಚಿಕೆ ಕುರಿತಾಗಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಒಮ್ಮತ ಮೂಡಲಿಲ್ಲ.

ಕೇವಲ 8 ಸಚಿವರ ವಿಚಾರವಾಗಿ ಒಮ್ಮತ ಮೂಡಿತು. ಹೀಗಾಗಿ ಇಂದು ಸಿದ್ದರಾಮತ್ತ, ಡಿಕೆ ಶಿವಕುಮಾರ್ ಜೊತೆಗೆ ಕೇವಲ 8 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಶಿವರಾಮ ಸಂಪುಟ ಸೇರುವವರು ಇವರೇ ನೋಡಿ.

– ಎಂಬಿ ಪಾಟೀಲ್ – ಸಿದ್ದರಾಮಯ್ಯ ಕೋಟಾ

– ಪರಮೇಶ್ವರ್​ – ಡಿಕೆ ಶಿವಕುಮಾರ್ ಕೋಟಾ

– ಪ್ರಿಯಾಂಕ್ ಖರ್ಗೆ – ಹೈಕಮಾಂಡ್ ಕೋಟಾ

– ಕೆ ಹೆಚ್ ಮುನಿಯಪ್ಪ – ಹೈಕಮಾಂಡ್ ಕೋಟಾ

– ಕೆಜೆ ಜಾರ್ಜ್ – ಸಿದ್ದರಾಮಯ್ಯ ಕೋಟಾ

– ಜಮೀರ್ ಅಹ್ಮದ್ ಖಾನ್ – ಸಿದ್ದರಾಮಯ್ಯ ಕೋಟಾ

– ಸತೀಶ್ ಜಾರಕಿಹೊಳಿ – ಸಿದ್ದರಾಮಯ್ಯ ಕೋಟಾ

– ರಾಮಲಿಂಗಾರೆಡ್ಡಿ – ಡಿಕೆ ಶಿವಕುಮಾರ್ ಕೋಟಾ

ಇಂದು ಸಚಿವರಾಗುತ್ತಿರುವವರ ಪಟ್ಟಿಯಲ್ಲಿ ಸಿದ್ದರಾಮಯ್ಯ ಕೋಟಾದಿಂದ ನಾಲ್ವರು, ಡಿಕೆ ಶಿವಕುಮಾರ್ ಕೋಟಾದಿಂದ ಇಬ್ಬರು ಮತ್ತು ಹೈಕಮಾಂಡ್ ಕೋಟಾದಿಂದ ಇಬ್ಬರು ಸಚಿವರಾಗುತ್ತಿದ್ದಾರೆ. ಈ ಎಂಟು ಸಂಭಾವ್ಯ ಸಚಿವರ ಪಟ್ಟಿಯಲ್ಲಿ ಯಾವುದೇ ಅಚ್ಚರಿಗಳಿಲ್ಲ. ಎಲ್ಲವೂ ನಿರೀಕ್ಷಿತ.