ಸಂಸತ್ತು ಭವನದ ಉದ್ಘಾಟನೆಯಲ್ಲಿ ಪಾಲ್ಗೊಳ್ಳಲಿರುವ NDAಯೇತರ ಪಕ್ಷಗಳು

ಮೇ 28ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿರುವ ಹೊಸ ಸಂಸತ್ತು ಭವನದ ಉದ್ಘಾಟನಾ ಕಾರ್ಯಕ್ರಮದಲ್ಲಿ 25 ಪಕ್ಷಗಳು ಭಾಗವಹಿಸಲಿವೆ.

ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟದಲ್ಲಿರುವ 18 ಪಕ್ಷಗಳ ಜೊತೆಗೆ ಎನ್​ಡಿಎ ಅಥವಾ ಯುಪಿಎನಲ್ಲಿ ಗುರುತಿಸಿಕೊಳ್ಳದ 7 ಪಕ್ಷಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿವೆ.

ಎನ್​ಡಿಎ/ಯುಪಿಎಯೇತರ 7 ಪಕ್ಷಗಳ ಭಾಗವಹಿಸುವಿಕೆ ಪ್ರಧಾನಿ ಮೋದಿ ಸರ್ಕಾರಕ್ಕೆ ಟೀಕೆಗಳಿಂದ ಕೊಂಚ ಸಮಾಧಾನ ನೀಡಿದೆ.

ದೇಶದ ಮೊದಲ ಆದಿವಾಸಿ ಮಹಿಳಾ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಉದ್ಘಾಟನಾ ಕಾರ್ಯಕ್ರಮಕ್ಕೆ ಅವಕಾಶ ಮತ್ತು ಆಹ್ವಾನ ನೀಡದೇ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ 20 ವಿರೋಧ ಪಕ್ಷಗಳು ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕಿವೆ.

ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಎನ್​ಡಿಎ/ಯುಪಿಎಯೇತರ ಪಕ್ಷಗಳು:

1. ಜೆಡಿಎಸ್​ ವರಿಷ್ಠ, ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

2. ಬಹುಜನ ಸಮಾಜ ಪಕ್ಷ

3. ಶಿರೋಮಣಿ ಅಕಾಲಿದಳ ( ಈ ಹಿಂದೆ ಎನ್​ಡಿಎ ಭಾಗವಾಗಿತ್ತು. ಲೋಕಸಭಾ ಚುನಾವಣೆಯಲ್ಲಿ ಪಂಜಾಬ್​ನಲ್ಲಿ ಮತ್ತೆ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಳ್ಳುವ ನಿರೀಕ್ಷೆ ಇದೆ.)

4. ಲೋಕಜನಶಕ್ತಿ ಪಕ್ಷ (ರಾಮವಿಲಾಸ್​ ಪಾಸ್ವಾನ್​ ಬಣ) – ಈ ಹಿಂದೆ ದೀರ್ಘಕಾಲ ಎನ್​ಡಿಎ ಭಾಗವಾಗಿತ್ತು.

5. ವೈಎಸ್​ ಆರ್​ ಕಾಂಗ್ರೆಸ್​ – ಆಂಧ್ರ ಮುಖ್ಯಮಂತ್ರಿ ಜಗನ್ಮೋಹನ್​ ರೆಡ್ಡಿ ಅವರ ಪಕ್ಷ

6. ತೆಲುಗು ದೇಶಂ ಪಕ್ಷ – ಈ ಹಿಂದೆ ದೀರ್ಘಕಾಲ ಎನ್​ಡಿಎ ಭಾಗವಾಗಿತ್ತು.

7. ಬಿಜು ಜನತಾ ದಳ – ಒಡಿಶಾ ಮುಖ್ಯಮಂತ್ರಿ ನವೀನ್​ ಪಟ್ನಾಯಕ್​ ಅವರ ಪಕ್ಷ

ಎನ್​ಡಿಎ ಮೈತ್ರಿಕೂಟದ ಪಕ್ಷಗಳು:

1. ಬಿಜೆಪಿ

2. ಶಿವಸೇನಾ (ಏಕನಾಥ್​ ಶಿಂಧೆ ಬಣ)

3. ನ್ಯಾಷನಲ್​ ಪೀಪಲ್ಸ್​ ಪಾರ್ಟಿ

4. ನ್ಯಾಷನಲಿಸ್ಟ್​ ಪ್ರೋಗ್ರೇಸಿವ್​ ಡೆಮಾಕ್ರಾಟಿಕ್​ ಪಾರ್ಟಿ

5. ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ

6. ಜನನಾಯಕ ಜನತಾ ಪಾರ್ಟಿ

7. ಎಐಎಡಿಎಂಕೆ

8. ಐಎಂಕೆಎಂಕೆ

9. ಎಜೆಎಸ್​ಯು

10. ಆರ್​ಪಿಐ

11. ಮಿಜೋ ನ್ಯಾಷನಲ್​ ಫ್ರಂಟ್​

12. ತಮಿಳ್​ ಮನಿಲಾ ಕಾಂಗ್ರೆಸ್​

13. ಐಟಿಎಫ್​ಟಿ

14. ಬೋಡೋ ಪೀಪಲ್ಸ್​ ಪಾರ್ಟಿ

15. ಪಟ್ಟಾಲಿ ಮಕ್ಕಲ್​ ಕಚ್ಚಿ (ಪಿಎಂಕೆ)

16. ಎಂಜಿಪಿ

17. ಅಪ್ನಾ ದಳ್​

18. ಎಜಿಪಿ