ಬ್ರಿಟನ್​ಗೆ ಹೋಗ್ತಿರುವ ಭಾರತೀಯರ ಸಂಖ್ಯೆ ಭಾರೀ ಹೆಚ್ಚಳ

ಭಾರತದಿಂದ ಬ್ರಿಟನ್​ಗೆ ವಲಸೆ ಹೋಗುತ್ತಿರುವ ಭಾರತೀಯರ ಪ್ರಮಾಣದಲ್ಲಿ ಭಾರೀ ಹೆಚ್ಚಳ ಆಗಿದೆ. ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯ ವೀಸಾದಡಿಯಲ್ಲಿ ಇಂಗ್ಲೆಂಡ್​ಗೆ ಹೋಗಿರುವ ಭಾರತೀಯರ ಸಂಖ್ಯೆ ಏರಿಕೆ ಆಗಿದೆ.

ಕೆಲಸಗಾರರು ವಿಭಾಗದಲ್ಲಿ ಬ್ರಿಟನ್​ ನೀಡುತ್ತಿರುವ ವೀಸಾದಲ್ಲಿ ಭಾರತೀಯರ ಪಾಲೇ ಶೇಕಡಾ 33ರಷ್ಟಿದೆ. 

 ನುರಿತ ಕೆಲಸಗಾರರು ಕೋಟಾದಡಿ ಈ ಬಾರಿ ಬ್ರಿಟನ್​ ವೀಸಾ ಪಡೆದಿರುವವರ ಪ್ರಮಾಣ ಬರೋಬ್ಬರೀ ಶೇಕಡಾ 63ರಷ್ಟು ಹೆಚ್ಚಳ ಆಗಿದೆ.

2021-22ರ ಅವಧಿಯಲ್ಲಿ 13,390 ಮಂದಿ ಹೋಗಿದ್ದರೆ 2022-23ರ ಅವಧಿಯಲ್ಲಿ 21,837 ಮಂದಿ ಹೋಗಿದ್ದಾರೆ. 

ಆರೋಗ್ಯ ಸುರಕ್ಷತೆ ವಿಭಾಗದಲ್ಲಿ ವೀಸಾ ಪಡೆದ ಭಾರತೀಯರ ಸಂಖ್ಯೆ ಶೇಕಡಾ 105ರಷ್ಟು ಹೆಚ್ಚಳವಾಗಿದೆ. 14,485ರಿಂದ 29,726 ಮಂದಿಗೆ ಏರಿಕೆ ಆಗಿದೆ.

ಸ್ಕಾಲರ್​ಶಿಪ್​ ಆಧರಿಸಿ ಶೈಕ್ಷಣಿಕ ವೀಸಾ ಪಡೆದಿರುವವರ ಸಂಖ್ಯೆ 53,429ರಿಂದ 1,38,532ಕ್ಕೆ ಹೆಚ್ಚಳ ಆಗಿದೆ.